3ನೇ ಅಲೆಯಲ್ಲಿ ಮೊದಲ ಸಲ ಶಿವಮೊಗ್ಗದಲ್ಲಿ ಕೊರೊನಾ ಸ್ಫೋಟ, ಡಬಲ್ ಸೆಂಚ್ಯೂರಿ ದಾಟಿ ಸೋಂಕು

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೋವಿಡ್ ಮೂರನೇ ಅಲೆಯಲ್ಲಿ ಮೊದಲ ಸಲ ಜಿಲ್ಲೆಯಲ್ಲಿ 251 ಪ್ರಕರಣಗಳು ಪತ್ತೆಯಾಗಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ಶಿವಮೊಗ್ಗ ತಾಲೂಕುವೊಂದರಲ್ಲೇ 141 ಪ್ರಕರಣಗಳು ಪತ್ತೆಯಾಗಿದ್ದು, ಭದ್ರಾವತಿಯಲ್ಲಿ 43, ತೀರ್ಥಹಳ್ಳಿಯಲ್ಲಿ 1, ಶಿಕಾರಿಪುರ 10, ಸಾಗರ 19, ಹೊಸನಗರ 23, ಸೊರಬ 2, ಬಾಹ್ಯ ಜಿಲ್ಲೆಯ 12 ಪ್ರಕರಣಗಳು ದೃಢಪಟ್ಟಿವೆ.
ಸಕ್ರಿಯ ಪ್ರಕರಣ ಭಾರೀ ಏರಿಕೆ
ಕೋವಿಡ್ ಆಸ್ಪತ್ರೆಯಲ್ಲಿ 101, ಡಿಸಿಎಚ್.ಸಿ 82, ಖಾಸಗಿ ಆಸ್ಪತ್ರೆ 64, ಹೋಂ ಐಸೋಲೇಷನ್ 480, ಟ್ರಿಯೇಜ್ ನಲ್ಲಿ 20 ಸೇರಿ ಒಟ್ಟು 747 ಸಕ್ರಿಯ ಪ್ರಕರಣಗಳಿವೆ.