ಪುಸ್ತಕ ಎತ್ತಿಕೊಳ್ಳುವಷ್ಟರಲ್ಲಿ ದುಷ್ಕರ್ಮಿಗಳು ವಿದ್ಯಾರ್ಥಿನಿಯ ಮೊಬೈಲ್ ದೋಚಿ ಪರಾರಿ

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಕೆಳಗಡೆ ಬಿದ್ದ ಪುಸ್ತಕ ಎತ್ತಿಕೊಳ್ಳುವಷ್ಟರಲ್ಲಿ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ವಿದ್ಯಾರ್ಥಿನಿಯ ಮೊಬೈಲ್ ದೋಚಿ ಪರಾರಿಯಾದ ಘಟನೆ ಗುರುವಾರ ನಡೆದಿದೆ.

READ | ಶಿವಮೊಗ್ಗದಲ್ಲಿ ಮುನ್ನೂರರ ಗಡಿ ದಾಟಿದ ಕೊರೊನಾ ಸೋಂಕು

ಕಾಶಿಪುರದ ಶ್ರೀನಿಧಿ ಎಂಬುವವರೇ ಮೊಬೈಲ್ ಕಳೆದುಕೊಂಡ ಯುವತಿ. ಕಾಲೇಜು ಮುಗಿಸಿ ವಾಪಸ್ ಮನೆಗೆ ಹೋಗುವಾಗ ಕಾಶಿಪುರ ಮುಖ್ಯ ರಸ್ತೆಯಲ್ಲಿ ಕೈಯಲ್ಲಿದ್ದ ಪುಸ್ತಕ ಬಿದ್ದಿದ್ದು, ಅದನ್ನು ಎತ್ತಿಕೊಳ್ಳಲು ಪಕ್ಕದಲ್ಲಿದ್ದ ಬೈಕ್ ಮೇಲೆ ತಮ್ಮ ಮೊಬೈಲ್ ಇಟ್ಟು ಕೆಳಗೆ ಬಗ್ಗಿದ್ದಾರೆ.
ಪುಸ್ತಕ ಎತ್ತಿಕೊಳ್ಳುವಾಗ ಹಿಂದಿನಿಂದ ಬೈಕ್ ನಲ್ಲಿ ಬಂದ ಮೂವರು ಮೊಬೈಲ್‌ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ವಿನೋಬನಗರ ಪೊಲೀಸ್ ಠಾಣೆ ದೂರು‌ ನೀಡಿದ್ದು, ತನಿಖೆ ನಡೆಯುತ್ತಿದೆ.