ಸೆಕೆಂಡ್ ವೀಕೆಂಡ್ ಕರ್ಫ್ಯೂ ಹೇಗಿದೆ ಜನ ಸಂಚಾರ, ಎಲ್ಲೆಲ್ಲಿ ಪೊಲೀಸ್ ಭದ್ರತೆ, ಗ್ರೌಂಡ್ ವಿಡಿಯೋ ರಿಪೋರ್ಟ್

 

ಸುದ್ದಿ ಕಣಜ.ಕಾಂ | DISTRICT | WEEKEND CURFEW
ಶಿವಮೊಗ್ಗ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ (weekend crfew) ವಿಧಿಸಿದ್ದು, ಉತ್ತಮ ಜನಸ್ಪಂದನೆ ಸಿಕ್ಕಿದೆ. ಸಂಕ್ರಾಂತಿ ಹಬ್ಬ(sankranti festival)ವಿದ್ದರೂ ಬೆಳಗ್ಗೆಯಿಂದ ನಗರದೆಲ್ಲೆಡೆ ಜನಸಂಚಾರ ವಿರಳವಾಗಿದೆ. ಹೂವು(flower), ಹಣ್ಣು(fruits) , ಕಬ್ಬಿನ ಜಲ್ಲೆ (sugar cane)ತಂದವರು ವಾಪಸ್ ತೆರಳುತಿದ್ದಾರೆ.

ಎರಡನೇ ವೀಕೆಂಡ್ ಕರ್ಫ್ಯೂ ಸ್ಥಿತಿ ತಿಳಿದುಕೊಳ್ಳಲು ವಿಡಿಯೋ (VIDEO REPORT) ವೀಕ್ಷಿಸಿ 

https://www.highperformancegate.com/cdeyj4mni3?key=f95ce548ba397001c5150fe03b415e4a

ನಗರದ ಉಷಾ ನರ್ಸಿಂಗ್ ಹೋಂ ಸರ್ಕಲ್, ಕೋಟ್ ಸರ್ಕಲ್, ಗೋಪಿ ಸರ್ಕಲ್, ಬಸವೇಶ್ವರ (ಡಿವಿಎಸ್) ಸರ್ಕಲ್, ಬಿ.ಎಚ್.ರಸ್ತೆ, ನವುಲೆ ರಸ್ತೆ, 100 ಅಡಿ ರಸ್ತೆ, ಅಮೀರ್ ಅಹ್ಮದ್ ಸರ್ಕಲ್, ಅಶೋಕ ಸರ್ಕಲ್, ನೆಹರೂ ರಸ್ತೆ ಹೀಗೆ ಎಲ್ಲೆಡೆ ಪೊಲೀಸರ ಬಿಗಿ ಬಂದೋಬಸ್ತ್ ಇದೆ. ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೆಡ್ ಗಳನ್ನು ಹಾಕಲಾಗಿದ್ದು, ಜನಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ.

ತುರ್ತು ಸೇವೆಗಳ ಹೊರತು ಪಡಿಸಿದ ವಾಹನಗಳನ್ನು ತಡೆದು ಪೊಲೀಸರು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಅನಗತ್ಯವಾಗಿ ಓಡಾಡುವವರ ಮೇಲೆ ಖಾಕಿ ಕಣ್ಣಿಟ್ಟಿದೆ. ಬೇಕರಿ, ಮೆಡಿಕಲ್, ಎಟಿಎಂ, ಹೋಟೆಲ್, ದಿನಸಿ ಅಂಗಡಿ, ಹೂವು, ಹಣ್ಣಿನ ಅಂಗಡಿಗಳು ಅಲ್ಲಲ್ಲಿ ತೆರೆದಿವೆ. ಗಾಂಧಿ ಬಜಾರ್ ಕೂಡ ಸಂಪೂರ್ಣ ಸ್ತಬ್ದವಾಗಿದೆ.

https://www.suddikanaja.com/2021/06/01/police-securitybin-shivamogga-due-to-lock-down/