ನಾಳೆಯಿಂದ ಶಿವಮೊಗ್ಗ- ಭದ್ರಾವತಿ ನಡುವಿನ ರೈಲ್ವೆ ಬ್ರಿಡ್ಜ್ ಕ್ಲೋಸ್, 2 ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ

ಸುದ್ದಿ ಕಣಜ.ಕಾಂ | TALUK | RAILWAY OVER BRIDGE
ಶಿವಮೊಗ್ಗ: ಶಿವಮೊಗ್ಗ- ಭದ್ರಾವತಿ ನಡುವೆ ಬರುವ ಎಲ್.ಸಿ ನಂ.34ರಲ್ಲಿ ರೈಲ್ವೇ ಓವರ್ ಬ್ರಿಡ್ಜ್ (RAILWAY OVER BRIDGE) ಕಾಮಗಾರಿ ನಡೆಯುತ್ತಿರುವುದರಿಂದ ಜನವರಿ 19ರಿಂದ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಸುಗಮ ಸಂಚಾರದ ದೃಷ್ಟಿಯಿಂದ ಈ ಭಾಗದಲ್ಲಿ ಸಂಚರಿಸುವ ವಾಹನಗಳ ಚಾಲಕರು, ಪ್ರಯಾಣಿಕರು ತಾತ್ಕಾಲಿಕ ಅವಧಿಗೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸೂಚಿಸಲಾಗಿರುವ ಪರ್ಯಾಯ ಮಾರ್ಗದಲ್ಲಿ ಸಂಚರಿಸತಕ್ಕದು.

ಪರ್ಯಾಯ ಮಾರ್ಗಗಳು
  1. ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ಸಂಚರಿಸುವ ವಾಹನಗಳು ಶಿವಮೊಗ್ಗ ಬಿಳಿಕಿ ಕ್ರಾಸ್-ಕೃಷ್ಣಪ್ಪ ವೃತ್ತದ ಮುಖಾಂತರ ಭದ್ರಾವತಿ ತಲುವುದು.
  2. ಭದ್ರಾವತಿಯಿಂದ ಶಿವಮೊಗ್ಗ ಕಡೆಗೆ ಸಂಚರಿಸುವ ವಾಹನಗಳು ಅಂಡರ್ ಬ್ರಿಡ್ಜ್- ಉಂಬ್ಳೇಬೈಲ್ ರಸ್ತೆ ಕೃಷ್ಣಪ್ಪ ವೃತ್ತ- ರಾಷ್ಟ್ರೀಯ ಹೆದ್ದಾರಿ-69ರ ಮುಖಾಂತರ ಶಿವಮೊಗ್ಗಕ್ಕೆ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.