ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದು, ಈ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಹಳ್ಳಿಗಳಲ್ಲಿ ಜನವರಿ 20ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ಹಾರೋಬೆನವಳ್ಳಿ, ಬಿ.ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರ ಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಬೆಕ್ಕಿನಕಲ್ಮಠ, ಅಬ್ಬರಘಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
READ | ನರಸೀಪುರ ನಾಟಿ ಔಷಧ ವಿತರಣೆ ಬಂದ್
ಆಲ್ಕೊಳ ವ್ಯಾಪ್ತಿಯಲ್ಲೂ ಪವರ್ ಕಟ್
ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ರಸ್ತೆ ತುರ್ತು ಕಾಮಗಾರಿ ಇರುವುದರಿಂದ, ಈ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಪಿ ಆ್ಯಂಡ್ ಟಿ ಕಾಲೋನಿ, ಕನಕನಗರ, ಸೂರ್ಯ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ.20 ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.