ಸುದ್ದಿ ಕಣಜ.ಕಾಂ | DISTRICT | SHIVAMOGGA POLICE
ಶಿವಮೊಗ್ಗ: ಜಿಲ್ಲೆಯಲ್ಲಿ 1,420 ಮಂದಿಯ ಹೆಸರುಗಳನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿರುವ ಎಸ್.ಪಿ, ಕೋಕಾ ಕೇಸ್ ನಲ್ಲಿ ಗಡಿಪಾರಾಗಿ ಮತ್ತೆ ಊರು ಸೇರುತ್ತಿರುವವ ಪಟ್ಟಿ ಸಿದ್ದಪಡಿಸಲಾಗುತ್ತಿದೆ ಎಂದರು.
ಹಾಲಿ ಇರುವ ರೌಡಿಗಳು ಹಾಗೂ ಪಟ್ಟಿಯಿಂದ ಕೈಬಿಟ್ಟಿರುವ ರೌಡಿಗಳ ಮೇಲೆ ಸದಾ ಕಣ್ಣಿಡಲಾಗುವುದು. ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ, ಶಾಲೆ ಬಿಟ್ಟ ಸಂದರ್ಭಗಳಲ್ಲಿ ಶಾಲಾ ಆವರಣದ ಬಳಿ ಪೊಲೀಸ್ ಗಸ್ತು ಹೆಚ್ಚಳ ಕುರಿತಂತೆ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
READ | ಶಿವಮೊಗ್ಗದಲ್ಲಿ ಕ್ರೈಂ ತಡೆಗೆ ಪೊಲೀಸ್ ಮಾಸ್ಟರ್ ಪ್ಲ್ಯಾನ್ ಸಿದ್ಧ, ಇಲ್ಲಿವೆ ಟಾಪ್ 11 ಅಂಶ
ಡ್ರಾಪೌಟ್ ವಿದ್ಯಾರ್ಥಿಗಳ ಬಗ್ಗೆ ಎಸ್.ಪಿ ಕಳವಳ
ನಗರದಲ್ಲಿ ಏಳನೇ ಇಲ್ಲವೇ ಎಂಟನೇ ತರಗತಿ ನಂತರ ಮಕ್ಕಳು ಶಾಲೆ ಬಿಟ್ಟು ಕೂಲಿ ಕೆಲಸ, ಬಾರ್, ಬೆಂಡಿಂಗ್, ಗಾರೆ ಕೆಲಸಗಳಿಗೆ ಹೋಗುವುದು ಕಂಡುಬರುತ್ತಿದೆ. ಇಂತಹ ಮಕ್ಕಳ ಕೈಗೆ ಮಾದಕ ವಸ್ತುಗಳು ಸಿಕ್ಕರೆ ವ್ಯಸನಿಗಳಾಗುವ ಸಾಧ್ಯತೆಯೂ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಕುಟುಂಬದ ಆರ್ಥಿಕ ಹೊರೆ ತಗ್ಗಿಸಲು ಕೂಲಿ ಕೆಲಸಕ್ಕೆ ಹೋಗುವ ಹುಡುಗರು ಅಪರಾಧ ಎಸಗಿ ಜೈಲು ಸೇರಿದ ಉದಾಹರಣೆಗಳೂ ಇವೆ. 13-15 ವರ್ಷ ವಯಸ್ಸಿನ ಮಕ್ಕಳೇ ದುಷ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದರು.
ಅಪರಾಧ ಎಸಗುವ ಹುಡುಗರ ಪ್ರದೇಶಗಳನ್ನು ಗುರುತಿಸಿ, ಯೂತ್ ವೆಲ್ ಫೇರ್, ಸೋಷಿಯಲ್ ವೆಲ್ ಫೇರ್, ಶಿಕ್ಷಣ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಹಾದಿತಪ್ಪಿದ ಮಕ್ಕಳನ್ನು ಸಮಾಜದಲ್ಲಿ ಉತ್ತಮವಾಗಿ ಬಾಳುವಂತೆ ಮಾಡಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
https://www.suddikanaja.com/2021/06/14/traffic-jam-in-shivamogga-city-3/