ಶಿವಮೊಗ್ಗದಲ್ಲಿ ಮತ್ತೆ ಶುರುವಾಯ್ತು ಉದ್ಯಮಿಗಳಿಗೆ ಥ್ರೆಟ್ ಕಾಲ್, ಬಚ್ಚನ್ ಹೆಸರಿನಲ್ಲಿ ಉದ್ಯಮಿಗೆ ಕೊಲೆ ಬೆದರಿಕೆ

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಬಚ್ಚನ್ ಹೆಸರಿನಲ್ಲಿ ಉದ್ಯಮಿಯೊಬ್ಬರಿಗೆ ಕರೆ ಮಾಡಿ ಹಣ ನೀಡುವಂತೆ ಜೀವ ಬೆದರಿಕೆ ಹಾಕಿರುವ ಘಟನೆ ಇತ್ತೀಚೆಗೆ ನಡೆದಿದ್ದು, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೋಬೋಸ್ಟ್ ಐರನ್ ಮತ್ತು ಸ್ಟೀಲ್ ಅಂಗಡಿ ಮಾಲೀಕ ನಾಸೀರ್ ಖಾನ್ ಎಂಬಾತನೇ ಜನವರಿ 23ರಂದು ಕರೆ ಮಾಡಿ ಕೊಲೆ ಬೆದರಿಕೆ ಹಾಕಲಾಗಿದೆ. ಕರೆಗೂ ಮುನ್ನ ಜ.18 ಮತ್ತು 21ರಂದು ನಾಸೀರ್ ಮತ್ತು ಆತನ ಮಗ ಹಾಗೂ ಮನೆಯ ಮೇಲೆ ದಾಳಿ ಯತ್ನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!