ಸುದ್ದಿ ಕಣಜ.ಕಾಂ | TALUK | CRIME NEWS
ಶಿಕಾರಿಪುರ: ಲಘು ಸಾಗಣೆ ವಾಹನ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, 16 ಜನ ಗಾಯಗೊಂಡ ಘಟನೆ ತಾಲೂಕಿನ ತರಲಘಟ್ಟ ಸಮೀಪ ಸಂಭವಿಸಿದೆ.
ಅಂಬಾರಗೊಪ್ಪದ ಗಂಗ್ಯಾ ನಾಯ್ಕ್ (49) ಮೃತಪಟ್ಟ ವ್ಯಕ್ತಿ. ಕೂಲಿ ಕೆಲಸಕ್ಕೆಂದು ಸರಕು ಲಘು ಸಾಗಣೆ ವಾಹನದಲ್ಲಿ ತೆರಳಿ ಕೂಲಿ ಹೊಂದಾಣಿಕೆ ಆಗಿಲ್ಲವೆಂಬ ಕಾರಣಕ್ಕೆ ವಾಪಸ್ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ.