ಶಿವಮೊಗ್ಗದಲ್ಲಿ ಇಂದು ಕೊರೊನಾ ಮಹಾಸ್ಫೋಟ, ಮತ್ತೆ ನೂರರ ಗಡಿ ದಾಟಿದ ಕೇಸ್

 

 

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಕೊರೊನಾ ಸ್ಫೋಟವಾಗಿದೆ. ಶನಿವಾರ ಒಂದೇ ದಿನ 116 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 8 ಜನ ಗುಣಮುಖರಾಗಿದ್ದಾರೆ.
ರೋಗದ ಲಕ್ಷಣ ಹೊಂದಿದ್ದ 1,994 ಜನರ ಮಾದರಿಯನ್ನು ಸಂಗ್ರಹಿಸಿದ್ದು, ಹಿಂದಿನದ್ದೂ ಸೇರಿ ಒಟ್ಟು 3,815 ಮಾದರಿಗಳು ನೆಗೆಟಿವ್ ಬಂದಿವೆ. ಸೋಂಕಿತರ ಸಂಪರ್ಕದಲ್ಲಿರುವವರ ಪರೀಕ್ಷೆ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ.

ತಾಲೂಕುವಾರು ಸೋಂಕಿನ ಸಂಖ್ಯೆ

ಶಿವಮೊಗ್ಗ ತಾಲೂಕಿನಲ್ಲಿ ಅತಿ ಹೆಚ್ಚು 89 ಪ್ರಕರಣಗಳು ಪತ್ತೆಯಾದರೆ, ಭದ್ರಾವತಿಯಲ್ಲಿ 12, ಶಿಕಾರಿಪುರ 6, ಹೊಸನಗರ 3, ಹೊರ ಜಿಲ್ಲೆಯ 3 ಹಾಗೂ ತೀರ್ಥಹಳ್ಳಿ, ಸಾಗರ, ಸೊರಬಯಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.
ಸಕ್ರಿಯ ಪ್ರಕರಣಗಳಲ್ಲೂ ಏರಿಕೆ
ಕೋವಿಡ್ ಆಸ್ಪತ್ರೆಯಲ್ಲಿ 33, ಡಿಸಿಎಚ್.ಸಿ 8, ಖಾಸಗಿ ಆಸ್ಪತ್ರೆಯಲ್ಲಿ 21, ಹೋಮ್ ಐಸೋಲೇಷನ್ ನಲ್ಲಿ 153, ಟ್ರಿಯೇಜ್ ನಲ್ಲಿ 10 ಜನರಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿಯೇ 11 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.

error: Content is protected !!