ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಬುಧವಾರ 348 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 69, ಡಿಸಿಎಚ್.ಸಿಯಲ್ಲಿ 30, ಖಾಸಗಿ ಆಸ್ಪತ್ರೆಯಲ್ಲಿ 9, ಮನೆ ಆರೈಕೆಯಲ್ಲಿ 2,806, ಟ್ರಯಾಜ್ ನಲ್ಲಿ 35 ಜನ ಸೋಂಕಿತರಿದ್ದಾರೆ.
READ | ಉಸ್ತುವಾರಿ ಸಚಿವ ನಾರಾಯಣಗೌಡ ಚೊಚ್ಚಲ ಗಣರಾಜ್ಯೋತ್ಸವದಲ್ಲಿ ಭಾಗಿ, ಶಿವಮೊಗ್ಗ ಅಭಿವೃದ್ಧಿಯ ಟಾಪ್ 5 ಪಾಯಿಂಟ್
ಇಂದು 1,020 ಮಾದರಿಗಳನ್ನು ಸಂಗ್ರಹಿಸಿದ್ದು, ಹಿಂದಿನದ್ದೂ ಸೇರಿ 2,083 ವರದಿಗಳು ನೆಗೆಟಿವ್ ಬಂದಿವೆ. ಶಿಕ್ಷಣ ಸಂಸ್ಥೆಯಲ್ಲಿ 11 ಮಾದರಿಗಳನ್ನು ಸಂಗ್ರಹಿಸಿದ್ದು, 98 ಪಾಸಿಟಿವ್ ಬಂದಿವೆ.
ಶಿವಮೊಗ್ಗದಲ್ಲಿ 125, ಭದ್ರಾವತಿಯಲ್ಲಿ 34, ತೀರ್ಥಹಳ್ಳಿಯಲ್ಲಿ 5, ಶಿಕಾರಿಪುರದಲ್ಲಿ 84, ಸಾಗರದಲ್ಲಿ 63, ಹೊಸನಗರದಲ್ಲಿ 12, ಸೊರಬದಲ್ಲಿ 23 ಹಾಗೂ ಹೊರ ಜಿಲ್ಲೆಯ 2 ಜನರಿಗೆ ಕೊರೊನಾ ಸೋಂಕು ತಗುಲಿದೆ.