ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೊರೊನಾ ಸೋಂಕು ಶುಕ್ರವಾರ ಒಬ್ಬರನ್ನು ಬಲಿ ಪಡೆದಿದೆ. ಸಾವಿನ ಸರಣಿಯು ಜಿಲ್ಲೆಯಲ್ಲಿ ಮುಂದುವರಿದಿದೆ.
ಇಂದು 525 ಜನರಿಗೆ ಕೊರೊನಾ ಸೋಂಕು ತಗುಲಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು 2300ಕ್ಕೆ ಏರಿಕೆಯಾಗಿದೆ. 253 ಜನರು ಚಿಕಿತ್ಸೆ ಪಡೆದು ರೋಗದಿಂದ ಗುಣಮುಖರಾಗಿದ್ದಾರೆ.
READ | ಶಿವಮೊಗ್ಗದಲ್ಲಿ ನಾಳೆ ವೀಕೆಂಡ್ ಕರ್ಫ್ಯೂ ಇರಲ್ಲ, ಪ್ರವಾಸಿ ತಾಣ ಎಲ್ಲ ಓಪನ್, ಏನೆಲ್ಲ ನಿಯಮಗಳು ಅನ್ವಯ
ಮನೆ ಆರೈಕೆಯಲ್ಲಿ ಸೋಂಕಿತರ ಬಹುಪಾಲು
ಸೋಂಕಿತರಲ್ಲಿ 2,164 ಜನರು ಮನೆ ಆರೈಕೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗದ ಲಕ್ಷಣಗಳು ತುಸು ಗಂಭೀರ ಇರುವವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ 49 ಜನರಿದ್ದಾರೆ. ಡಿಸಿಎಚ್ಸಿಯಲ್ಲಿ 32, ಖಾಸಗಿ ಆಸ್ಪತ್ರೆಯಲ್ಲಿ 20 ಹಾಗೂ ಟ್ರಯಾಜ್ ನಲ್ಲಿ 35 ಸೋಂಕಿತರಿದ್ದಾರೆ.
ಶಿವಮೊಗ್ಗ, ಭದ್ರಾವತಿಯಲ್ಲಿ ಭರ್ಜರಿ ಸೋಂಕು
ಶಿವಮೊಗ್ಗ ತಾಲೂಕಿನಲ್ಲಿ 239, ಭದ್ರಾವತಿಯಲ್ಲಿ 138 ಸೋಂಕಿತರಿದ್ದಾರೆ. ತೀರ್ಥಹಳ್ಳಿಯಲ್ಲಿ 44, ಶಿಕಾರಿಪುರದಲ್ಲಿ 23, ಸಾಗರದಲ್ಲಿ 29, ಹೊಸನಗರದಲ್ಲಿ 18, ಸೊರಬದಲ್ಲಿ 27, ಬಾಹ್ಯ ಜಿಲ್ಲೆಯಲ್ಲಿ 7 ಜನರಿಗೆ ಸೋಂಕು ತಗುಲಿದೆ.
ಕೋವಿಡ್ಗೆ ಉಚಿತ ಚಿಕಿತ್ಸೆ, ರೈತರಿಗೆ 81 ಕೋಟಿ ರೂ., ಸರ್ಪೋಟ್ ಪ್ಯಾಕೇಜ್ನಲ್ಲಿ ಏನೇನು ಸಿಕ್ತು, ಇಲ್ಲಿದೆ ಮಾಹಿತಿ