ಶಿವಮೊಗ್ಗದಲ್ಲಿ 400ರ ಗಡಿ ದಾಟಿದ ಕೊರೊನಾ ಸೋಂಕು, ತಾಲೂಕುವಾರು ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: 490 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಂದು ಸಹ ಒಬ್ಬರು ಮೃತಪಟ್ಟಿದ್ದಾರೆ. 361 ಜನ ಕಾಯಿಲೆಯಿಂದ ಗುಣಮುಖರಾಗಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ 168, ಭದ್ರಾವತಿಯಲ್ಲಿ 85, ತೀರ್ಥಹಳ್ಳಿಯಲ್ಲಿ 34, ಶಿಕಾರಿಪುರದಲ್ಲಿ 70, ಸಾಗರದಲ್ಲಿ 57, ಹೊಸನಗರದಲ್ಲಿ 34, ಸೊರಬದಲ್ಲಿ 29, ಬಾಹ್ಯ ಜಿಲ್ಲೆಯ 13 ಮಂದಿಗೆ ಸೋಂಕು ತಗುಲಿದೆ.

ಸೋಂಕಿನ ಲಕ್ಷಣವಿರುವ 719 ಜನರ ಮಾದರಿಗಳನ್ನು ಸಂಗ್ರಹಿಸಿದ್ದು, ಹಳೆಯದ್ದೂ ಸೇರಿ 2081 ವರದಿಗಳು ನೆಗೆಟಿವ್ ಇವೆ. ಶಿಕ್ಷಣ ಸಂಸ್ಥೆಯಲ್ಲಿ 138 ಪಾಸಿಟಿವ್ ಬಂದಿವೆ. ಕೋವಿಡ್ ಆಸ್ಪತ್ರೆಯಲ್ಲಿ 58 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸಿಎಚ್.ಸಿಯಲ್ಲಿ 24, ಖಾಸಗಿ ಆಸ್ಪತ್ರೆಯಲ್ಲಿ 10, ಟ್ರಯಾಜ್ ನಲ್ಲಿ 12 ಹಾಗೂ ಮನೆ ಆರೈಕೆಯಲ್ಲಿ 2,529 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

error: Content is protected !!