ವೀಕೆಂಡ್ ಕರ್ಫ್ಯೂ ವೇಳೆ ಸರ್ಕಾರಿ ಶಾಲೆಗೆ ಅಭಿವೃದ್ಧಿಯ ಸ್ಪರ್ಶ

 

 

ಸುದ್ದಿ ಕಣಜ.ಕಾಂ | TALUK | SIGANDUR CHOWDESHWARI 
ಶಿವಮೊಗ್ಗ: ವೀಕೆಂಡ್ ಕರ್ಫ್ಯೂ (weekend curfew) ವೇಳೆ ಹಲವರು ಮನೆಯಲ್ಲಿಯೇ ಕುಳಿತು ಕಾಲಹರಣ ಮಾಡಿದರೆ, ಇಲ್ಲಿ ಸಮಾನ ಮನಸ್ಕರು ಸೇರಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಮುಂದಾಗಿದ್ದಾರೆ.
`ಶ್ರೀ ಕ್ಷೇತ್ರ ಸಿಗಂದೂರಿನ ಚಿತ್ತ, ಸರ್ಕಾರಿ ಶಾಲೆಗಳತ್ತ’ ಶೀರ್ಷಿಕೆ ಅಡಿಯಲ್ಲಿ ಕೈಗೆತ್ತಿಕೊಂಡಿರುವ ಸಾಮಾಜಿಕ ಕಳಕಳಿಯ ಕಾರ್ಯದ ಐದನೇ ಹೆಜ್ಜೆಯ ಅಂಗವಾಗಿ ಭಾನುವಾರ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಮಾದರಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಐದನೇ ಹೆಜ್ಜೆಯ ಕಾಯಕಲ್ಪಕ್ಕೆ ಶರಾವತಿ ಹಿನ್ನೀರಿನ ಕುಗ್ರಾಮದ ಕುದರೂರು (kudaluru) ಸರ್ಕಾರಿ ಶಾಲೆ (government school)ಗೆ ಸಂಪೂರ್ಣ ಸ್ವಚ್ಛತೆಯೊಂದಿಗೆ ಸುಣ್ಣ ಬಣ್ಣ ಮಾಡಲಾಗಿದೆ. ಶಾಲಾಭಿವೃದ್ಧಿ ಸಮಿತಿಯು ವೀಕೆಂಡ್ ಕರ್ಫ್ಯೂ ಸದುಪಯೋಗ ಪಡಿಸಿಕೊಂಡು ಶಾಲಾ ಕಟ್ಟಡಕ್ಕೆ ಸಂಪೂರ್ಣ ಸುಣ್ಣ ಬಣ್ಣ ಮಾಡಿದೆ. ಇದಕ್ಕೆ ಗ್ರಾಮಸ್ಥರೂ ಸಹಕಾರ ನೀಡಿದ್ದು, ಶಾಲಾ ಕೈತೋಟ ಕೂಡ ಸಿದ್ಧಪಡಿಸಲಾಗಿದೆ. ಈ ವೇಳೆ ಮುಖ್ಯ ಶಿಕ್ಷಕಿ ಪೂರ್ಣಿಮಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಮಾವಿನಕೈ ಉಪಸ್ಥಿತರಿದ್ದರು.
sigandur school weekend 1
ವೀಕೆಂಡ್ ಕರ್ಫ್ಯೂ ದಿನದಂದು ಶಾಲೆಯ ಆವರಣ ಸ್ವಚ್ಚಗೊಳಿಸಿರುವುದು

ಸಿಗಂದೂರು ಕ್ಷೇತ್ರದ ಸಾಮಾಜಿಕ ಬದ್ಧತೆ
ಶರಾವತಿ ಹಿನ್ನೀರಿನ (sharavathi back water) ಸರ್ಕಾರಿ ಶಾಲೆಗಳನ್ನು ಶ್ರೀ ಕ್ಷೇತ್ರ ಸಿಗಂದೂರು ದೇವಸ್ಥಾನ (sigandur chowdeshwari temple)ದಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕುದರೂರು ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಬಳಿಯಲಾಗಿದೆ.
ಶ್ರೀ ಸಿಗಂದೂರು ಚೌಡಮ್ಮ ದೇವಿ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (sigandur chowdeshwari education and charitable trust) ಸಿಗಂದೂರು ಕಳೆದ ಹಲವು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿದೆ. ಅದರಂತೆ 2021-22ನೇ ವರ್ಷದಲ್ಲಿ ಸರ್ಕಾರಿ ಶಾಲೆಗಳ ಉಳಿಸುವಿಗೆ ಮುಂದಾಗಿದೆ. ಶ್ರೀ ಕ್ಷೇತ್ರ ಸಿಗಂದೂರಿನ ಪ್ರಧಾನ ಕಾರ್ಯದರ್ಶಿ ಎಚ್.ಆರ್.ರವಿಕುಮಾರ್ ವಿಶೇಷ ಕಾಳಜಿಯ ಫಲವಾಗಿ ಆಯ್ದ ಸುಮಾರು 10 ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಮಾಡಲಾಗುತ್ತಿದೆ.

ಗಾಂಧಿ ಜಯಂತಿಯಂದು ಶುರುವಾದ ಮಾದರಿ ಕಾರ್ಯ

`ಶ್ರೀ ಕ್ಷೇತ್ರ ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ’ ವಿಶೇಷ ಮುನ್ನುಡಿಯೊಂದಿಗೆ ಮಹಾತ್ಮ ಗಾಂಧಿ ಜಯಂತಿಯಂದು ತಾಲ್ಲೂಕಿನ ತೀರ ಹಿಂದುಳಿದ ಪ್ರದೇಶವಾದ ಚನ್ನಗೊಂಡ (channagonda) ಗ್ರಾಮದ ಕಟ್ಟಿನಕಾರು (kattikaru) ಕ್ಲಸ್ಟರ್ ನಲ್ಯಾರ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಲಾಗಿತ್ತು.
ಈ ಕಾರ್ಯಕ್ಕೆ 11 ಜನರ ಸಮಾನ ಮನಸ್ಕ ಶಿಕ್ಷಕರ ತಂಡವೂ ಕೈಜೋಡಿಸಿದೆ. ಈ ತಂಡದಲ್ಲಿ 3 ಜನ ಸಿ.ಆರ್.ಪಿ (CRP) ಶಿಕ್ಷಕರು ಅನುಭವಿ ಪೈಂಟರ್, ಇಬ್ಬರು ನುರಿತ ಚಿತ್ರಕಲೆಗಾರರಿದ್ದಾರೆ. ಕರೂರು ಹೋಬಳಿಯ ಸಾಕಷ್ಟು ಶಿಕ್ಷಕರಿದ್ದು. ಕಳೆದ ಒಂದು ತಿಂಗಳಿನಿಂದ ಶ್ರೀ ಕ್ಷೇತ್ರದ ಜೊತೆಗೆ ಸರ್ಕಾರಿ ಶಾಲೆಗಳ ಉಳಿವಿಗೆ ಪ್ರತಿದಿನ ಬಿಡುವು ಮಾಡಿಕೊಂಡು ಹಾಗೂ ವಾರಾಂತ್ಯದಲ್ಲಿ ರಾತ್ರಿಯಿಡಿ ಸ್ವತಃ ಶಿಕ್ಷಕರೇ ಮುಂದೆ ನಿಂತು ಬಣ್ಣ ಬಳಿಯುದರ ಮೂಲಕ ಮಾದರಿಯಾಗಿದ್ದಾರೆ.
ರಾಜ್ಯ ವ್ಯಾಪಿ ವಿಸ್ತರಿಸುವ ಯೋಜನೆ
`ಶ್ರೀ ಕ್ಷೇತ್ರ ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ’ ಎಂಬ ಶೈಕ್ಷಣಿಕ ಕಾಳಜಿಯ ಕಾರ್ಯವನ್ನು ನಾಡಿನ ಕನ್ನಡ ಸರ್ಕಾರಿ ಶಾಲೆಗಳಿಗೆ ಅರ್ಪಿಸುತ್ತಿದೆ. ಮೊದಲನೇ ಹಂತವಾಗಿ ಶರಾವತಿ ಹಿನ್ನೀರಿನ ಕರೂರು(karuru)- ಭಾರಂಗಿ (bharangi) ಹೋಬಳಿಯ ಆಯ್ದ ಶಾಲೆಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ವಿಸ್ತರಿಸುವ ಅಭಿಲಾಷೆಯನ್ನು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಎಚ್.ಆರ್.ರವಿಕುಮಾರ್ ಹೊಂದಿದ್ದಾರೆ.
10ರಲ್ಲಿ ಐದು ಶಾಲೆಗಳ ಕಾರ್ಯ ಪೂರ್ಣ
ಮೊದಲ ಹಂತದಲ್ಲಿ 10 ಶಾಲೆಗಳಿಗೆ ಸುಣ್ಣ ಬಣ್ಣ ಮಾಡಲು ನಿರ್ಧರಿಸಿದ್ದು ಪ್ರಸ್ತುತ 5 ಸರ್ಕಾರಿ ಶಾಲೆಗಳು ಸಂಪೂರ್ಣ ಸುಣ್ಣ ಬಣ್ಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದಿಂದ ಹೆಚ್ಚಿನ ಸಹಕಾರ ನೀಡಲಾಗುವುದು ಧರ್ಮಾಧಿಕಾರಿ ಡಾ.ಎಸ್.ರಾಮಪ್ಪ ತಿಳಿಸಿದ್ದಾರೆ.

https://www.suddikanaja.com/2021/10/05/bus-from-sigandur-to-bangalore/

error: Content is protected !!