ಎಸ್ಸೆಸ್ಸೆಲ್ಸಿ ಪಾಸ್ ಆದವರಿಗೆ ಕೆಸಿಸಿ ಬ್ಯಾಂಕ್ ನಲ್ಲಿ ಉದ್ಯೋಗ, ಆಕರ್ಷಕ ಸಂಬಳ, ಈಗಲೇ ಅರ್ಜಿ ಸಲ್ಲಿಸಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಧಾರವಾಡದ ಕರ್ನಾಟಕ ಸೆಂಟ್ರಲ್ ಕೋ- ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಖಾಲಿ ಇರುವ 52 ಸಿಪಾಯಿ ಹುದ್ದೆಗಳ ಭರ್ತಿಗೆ ಸಹಕಾರ ಇಲಾಖೆಯ ನಿಬಂಧಕರ ಆದೇಶದನ್ವಯ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
ವೇತನ ಶ್ರೇಣಿ
12,500-250-13000-300-14200-350-15600-400-17200-450-19000-500-21000-600-24000 ಮತ್ತು ನಿಯಮಾನುಸಾರ ತುಟ್ಟಿ ಭತ್ಯೆ, ಇತರೆ ಭತ್ಯೆಗಳನ್ನು ನೀಡಲಾಗುವುದು.

JOBS FB Link

READ | ಪಿಯುಸಿ ಪಾಸ್ ಆದವರಿಗ ಉದ್ಯೋಗ ಅವಕಾಶ, ಈಗಲೇ ಅರ್ಜಿ ಸಲ್ಲಿಸಿ

ವಿದ್ಯಾರ್ಹತೆ, ವಯೋಮಿತಿ
ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು. ಹಾಗೂ ಅರ್ಜಿಯನ್ನು ಸ್ವೀಕರಿಸಲು ನಿಗದಿಯಾಗಿರುವ ಕೊನೆ ದಿನಾಂಕಕ್ಕೆ ಕನಿಷ್ಠ 18 ವರ್ಷವಾಗಿರಬೇಕು. ಗರಿಷ್ಠ ವಯೋಮಿತಿಯು ಆಯಾ ವರ್ಗಕ್ಕೆ ಭಿನ್ನವಾಗಿದೆ. ಸಾಮಾನ್ಯ ವರ್ಗಕ್ಕೆ 35 ವರ್ಷಗಳು, ಎಸ್.ಸಿ, ಎಸ್.ಟಿ, ಪ್ರವರ್ಗ 1ಸ 40 ವರ್ಷಗಳು, ಇತರೆ ಹಿಂದುಳಿದ ವರ್ಗಗಳು 38 ವರ್ಷಗಳು. ಜೊತೆಗೆ, ವಿಕಲಚೇತನರು ಮತ್ತು ವಿಧವೆಯರಿಗೆ 10 ವರ್ಷ ವಯೋಮಿತಿ ಸಡಿಲಕೆ ಇರುತ್ತದೆ. ಇನ್ನಷ್ಟು ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ.
ಆಯ್ಕೆ ವಿಧಾನ
ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಅಂಕಗಳ ಶೇಕಡಾವಾರು ಮೆರಿಟ್ ಆಧಾರದ ಮೇಲೆ 1;5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಶೇ.85ಕ್ಕಿಳಿಸಿ ಉಳಿದ ಪ್ರತಿಶತ 15 ಅಂಕಗಳನ್ನು ಸಂದರ್ಶನಕ್ಕೆ ನೀಡಲಾಗುವುದು. ಅಂಕಗಳನ್ನು ಒಟ್ಟು ಸೇರಿಸಿ ರ್ಯಾಂಕಿಂಗ್ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳು, ಹಿಂದುಳಿದ ವರ್ಗದ ಅಭ್ಯರ್ಥಿಗಳು 500 ರೂಪಾಯಿ, ಎಸ್.ಸಿ, ಎಸ್.ಟಿ. ಪ್ರವರ್ಗ 1, ವಿಕಲಚೇತನರು, ಮಾಜಿ ಸೈನಿಕರು, ವಿಧವಾ ಅಭ್ಯರ್ಥಿಗಳು 250 ರೂಪಾಯಿ ನಿಗದಿಪಡಿಸಲಾಗಿದೆ. ನಿಗದಿತ ಶುಲ್ಕವನ್ನು ಸದಸದ್ಯ ಕಾರ್ಯದರ್ಶಿ, ನೇಮಕಾತಿ ಸಮಿತಿ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಕೆಸಿಸಿ ಬ್ಯಾಂಕ್ ಲಿ. ಧಾರವಾಡ ಈ ಹೆಸರಿನಲ್ಲಿ ಕ್ರಾಸ್ ಮಾಡಿದ ಡಿಡಿ ಪಡೆದು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ | ಜನವರಿ 29ರ ಬೆಳಗ್ಗೆ 11 ಗಂಟೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಫೆಬ್ರವರಿ 19, ಸಂಜೆ 5 ಗಂಟೆ

NOTIFICATION   

   WEBISTE

https://www.suddikanaja.com/2021/09/20/jobs-in-shivamogga-for-sslc-and-commerce-passed-candidates/

error: Content is protected !!