ಕುವೆಂಪು ವಿಶ್ವವಿದ್ಯಾಲಯಕ್ಕೆ ಒಂದು ವಾರ ರಜೆ, ಆನ್ಲೈನ್ ನಲ್ಲೇ ಕ್ಲಾಸ್

 

 

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿರುವ ಗ್ರಂಥಾಲಯ ಮತ್ತು ವಿದ್ಯಾರ್ಥಿ ನಿಲಯಗಳ ಕೆಲವು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ವಿಶ್ವವಿದ್ಯಾಲಯಕ್ಕೆ ರಜೆ ಘೋಷಿಸಲಾಗಿದೆ.

ಜನವರಿ 17ರಿಂದ 21ರ ವರೆಗೆ ತರಗತಿಗಳಿಗೆ ರಜೆ ಘೋಷಿಸಲಾಗಿದ್ದು, 22 ನಾಲ್ಕನೇ ಶನಿವಾರ ಹಾಗೂ 23  ಭಾನುವಾರ ಇರುವುದರಿಂದ‌ ಒಟ್ಟು ಏಳು ದಿನ ರಜೆ ಘೋಷಿಸಿದಂತಾಗಿದೆ. ಮುಂದುವರಿದಂತೆ ಎಲ್ಲ ಸ್ನಾತಕೋತ್ತರ ಪ್ರಥಮ, ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ತರಗತಿಗಳನ್ನು ನಡೆಸಲು ಆದೇಶದಲ್ಲಿ ತಿಳಿಸಲಾಗಿದೆ.

error: Content is protected !!