ಸುದ್ದಿ ಕಣಜ.ಕಾಂ | KARNATAKA | COVID GUIDELINES
ಬೆಂಗಳೂರು: ಕೊರೊನಾ ರೂಪಾಂತರಿ ವೈರಸ್ ಓಮಿಕ್ರಾನ್ (omicron) ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ (state government) ಖಡಕ್ ನಿಯಮಗಳನ್ನು ಜಾರಿಗೆ ತಂದಿದೆ. ನೈಟ್ ಕರ್ಫ್ಯೂ (night curfew) ಮುಂದುವರಿಯಲಿದ್ದು, ಹೊಸದಾಗಿ ವಾರಾಂತ್ಯ ಕರ್ಫ್ಯೂ (weekend curfew) ಜಾರಿಗೆ ಬರಲಿದೆ.
ಹೊಸ ಗೈಡ್ ಲೈನ್ಸ್ (guidelines) ಪ್ರಕಾರ, ಜನವರಿ 5ರಿಂದ 19ರ ವರೆಗೆ ಜಾರಿಗೆ ಬರುವಂತೆ ಬೆಂಗಳೂರು ಹಾಗೂ ರಾಜ್ಯದಾದ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ.
- ರಾತ್ರಿ ಕರ್ಫ್ಯೂ 10 ರಿಂದ ಮುಂಜಾನೆ 5 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ.
- ಎಲ್ಲ ಕಚೇರಿಗಳು (office) ವಾರದಲ್ಲಿ ಐದು ದಿನ (ಶನಿವಾರ, ಭಾನುವಾರ ಹೊರತು) ಮಾತ್ರ ಕಾರ್ಯನಿರ್ವಹಿಸಲಿವೆ.
- ಶೇ.50ರಷ್ಟು ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೆಲಸ ಮಾಡಲು ಅವಕಾಶ
- ವಾರಾಂತ್ಯ ಕರ್ಫ್ಯೂ ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಾರಿ. BMTC ಬಸ್ ಎಂದಿನಂತೆ ಇರಲಿದೆ.
- ಬೆಂಗಳೂರು ನಗರದ 10, 11 ಮತ್ತು 12ನೇ ತರಗತಿ ಶಾಲೆಗಳು ಹೊರತುಪಡಿಸಿ, ಎಲ್ಲ ಶಾಲಾ-ಕಾಲೇಜುಗಳು ಬಂದ್ (ಜ.6ರಿಂದ ಅನ್ವಯ)
- ಪಬ್(pub), ಕ್ಲಬ್(club), ರೆಸ್ಟೋರೆಂಟ್(restaurants), ಬಾರ್(bar), ಹೋಟೆಲ್ (Hotel) ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಶೇ.50ರಷ್ಟು ಜನರು ಸೇರಲು ಅವಕಾಶ
- ಸಿನಿಮಾ ಹಾಲ್(Cinema halls), ಮಲ್ಟಿಫ್ಲೆಕ್ಸ್, ಥಿಯೇಟರ್(multiplexes), ರಂಗಮಂದಿರ(theater), ಆಡಿಟೋರಿಯಂ (auditorium) ಸೇರಿದಂತೆ ಪಬ್ಲಿಕ್ ಪ್ಲೇಸ್ ಗಳಲ್ಲಿ ಶೇ.50ರಷ್ಟು ಜನರು ಸೇರಬಹುದು
- ಹೊರಾಂಗಣ(open spaces)ದಲ್ಲಿ ನಡೆಯುವ ವಿವಾಹ ಸಮಾರಂಭದಲ್ಲಿ 200, ಒಳಾಂಗಣ(closed places)ದಲ್ಲಿ 100 ಜನರಿಗೆ ಅವಕಾಶ
- ದೇವಸ್ಥಾನ, ಧಾರ್ಮಿಕ ಕೇಂದ್ರ, ಸ್ವಿಮ್ಮಿಂಗ್ ಪೂಲ್, ಜಿಮ್, ಸ್ಪೋರ್ಟ್ ಕಾಂಬ್ಲೆಕ್ಸ್, ಸ್ಟೇಡಿಯಂಗಳಲ್ಲಿ ಶೇ.50ರ ಮಿತಿ
- ಎಲ್ಲ ಪ್ರತಿಭಟನಾ ಮೆರವಣಿಗೆ, ಧರಣಿಗಳೀಗೆ ನಿಷೇಧ
- ಕೇರಳ, ಮಹಾರಾಷ್ಟ್ರಗಳಿಂದ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು.
- ಕೇಂದ್ರ, ರಾಜ್ಯ ಸರ್ಕಾರದ ಕಚೇರಿ ಮತ್ತು ಅವುಗಳ ಆಟೊನಾಮಸ್ ಬಡೀಸ್, ಕಾರ್ಪೋರೇಷನ್ ಕಾರ್ಯನಿರ್ವಹಣೆಗೆ ಅವಕಾಶ, ತುರ್ತು ಸೇವೆಯೂ ಲಭ್ಯ
- ಎಲ್ಲ ಪಬ್ಲಿಕ್ ಪಾರ್ಕ್ ಗಳು ಬಂದ್, ಐಟಿ ಕಂಪನಿಗಳು ಐಡಿ ಕಾರ್ಡ್ ತೋರಿಸಿ ಹೋಗಬಹುದು.
- ರೋಗಿಗಳು, ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವವರು ಮತ್ತು ಅವರೊಂದಿಗೆ ಸಂಬಂಧಿಕರು, ಲಸಿಕೆ ಪಡೆಯುವವರು ಸಂಚಾರಕ್ಕೆ ಅವಕಾಶ
- ಆಹಾರ, ತರಕಾರಿ, ಹಣ್ಣು, ಮಾಂಸ, ಮೀನು, ಡೈರಿ, ಹಾಲಿನ ಬೂತ್, ಬೀದಿ ವ್ಯಾಪಾರ ಅವಕಾಶ, ಹೋಮ್ ಡಿಲಿವರಿಯೂ ಅಬಾಧಿತ. ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಗಳಿಗೆ ಅವಕಾಶ
https://www.suddikanaja.com/2021/08/04/high-alert-in-shivamogga-due-to-covid-third-wave/