ಸುದ್ದಿ ಕಣಜ.ಕಾಂ | DISTRICT | WEEKEND CURFEW
ಶಿವಮೊಗ್ಗ: ಕೋವಿಡ್ ಮೂರನೇ ಅಲೆಗೆ ಮೂಗುದಾರ ಹಾಕುವುದಕ್ಕಾಗಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ವೀಕೆಂಡ್ ಕರ್ಫ್ಯೂ ವಿಧಿಸಿದೆ.
ಶಿವಮೊಗ್ಗದಲ್ಲಿ ಮೊದಲ ವೀಕೆಂಡ್ ಕರ್ಫ್ಯೂ ಪ್ರಯುಕ್ತ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಇದೆ. ಸಾರ್ವಜನಿಕರ ಓಡಾಟದ ಮೇಲೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ.
ವೀಕೆಂಡ್ ಕರ್ಫ್ಯೂ ವಿಡಿಯೋಗಾಗಿ ಕೆಳಗಿನ ವಿಡಿಯೋ ವೀಕ್ಷಿಸಿ (VIDEO REPORT)
ಎಲ್ಲೆಲ್ಲಿ ಪೊಲೀಸ್ ಬಂದೋಬಸ್ತ್
ನಗರದ ಉರ್ಷಾ ನರ್ಸಿಂಗ್ ಹೋಮ್ ರಸ್ತೆ, ಮಹಾವೀರ ವೃತ್ತ, ನೆಹರೂ ಸ್ಟೇಡಿಯಂ ಎದುರು, ಗೋಪಿ ವೃತ್ತ, ಜೈಲು ವೃತ್ತ, ಪೊಲೀಸ್ ಚೌಕಿ, ಆಲ್ಕೋಳಾ ಸರ್ಕಲ್, ಲಕ್ಷ್ಮೀ ಟಾಕೀಸ್ ವೃತ್ತ, ಅಮೀರ್ ಅಹ್ಮದ್ ವೃತ್ತ, ಅಶೋಕ ವೃತ್ತ, ಹೊಳೆ ಬಸ್ ಸ್ಟಾಪ್, ನ್ಯೂಮಂಡ್ಲಿ ಹೀಗೆ ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅನಗತ್ಯವಾಗಿ ಓಡಾಡುವವರ ಮೇಲೆ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುತ್ತಿದೆ. ಯಾವುದೇ ಸಬೂಬು ನೀಡಿದರೂ ದಂಡದ ವಿಧಿಸದ ಹೊರತು ಬಿಡುತ್ತಿಲ್ಲ.
ಹೋಟೆಲ್, ಹಾಲು, ತರಕಾರಿ, ದಿನಸಿ ಅಂಗಡಿ, ಮೆಡಿಕಲ್, ಬೇಕರಿ, ಆಸ್ಪತ್ರೆ ಸೇರಿದಂತೆ ಅತ್ಯಗತ್ಯ ಸೇವೆಗಳು ಲಭ್ಯ ಇವೆ. ಆಟೋ, ಸರ್ಕಾರಿ, ಖಾಸಗಿ ಬಸ್ ಸೇವೆಯೂ ಲಭ್ಯವಿದೆ. ಆದರೆ, ಬಟ್ಟೆ, ಮೊಬೈಲ್, ಅಂಗಡಿ ಇನ್ನಿತರ ಅಂಗಡಿಗಳು ಬಂದ್ ಇವೆ.
https://www.suddikanaja.com/2021/06/01/police-securitybin-shivamogga-due-to-lock-down/