ಸುದ್ದಿ ಕಣಜ.ಕಾಂ | DISTRICT | WEEKEND CURFEW
ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸಭೆ ನಡೆದಿದ್ದು, ವೀಕೆಂಡ್ ಕರ್ಫ್ಯೂ (weekend curfew) ಅನ್ನು ಸರ್ಕಾರ ಹಿಂಪಡೆದಿದೆ. ಹೀಗಾಗಿ, ಶನಿವಾರ ಮತ್ತು ಭಾನುವಾರ ಕರ್ಫ್ಯೂ ಇರುವುದಿಲ್ಲ.
ಶಿವಮೊಗ್ಗ(shivamogga)ಕ್ಕೂ ಈ ನಿಯಮ ಅನ್ವಯವಾಗಲಿದ್ದು, ನಾಳೆ ಬೆಳಗ್ಗೆಯಿಂದ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ, ಶುಕ್ರವಾರ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ (night curfew) ಇರಲಿದೆ.
ಶನಿವಾರ ಮತ್ತು ಭಾನುವಾರ ಪ್ರವಾಸಿ ತಾಣಗಳು ತೆರೆದಿರಲಿವೆ. ಪ್ರವೇಶಕ್ಕೆ ನಿರ್ಬಂಧ ಇರುವುದಿಲ್ಲ. ಇನ್ನುಳಿದ ಎಲ್ಲವೂ ನಿತ್ಯದಂತೆಯೇ ಇರಲಿದೆ.
- ಆಸ್ಪತ್ರೆಗೆ ಸೇರುವವರ ಸಂಖ್ಯೆ ಶೇ.5ರಷ್ಟಿದೆ. ಒಂದುವೇಳೆ, ಈ ಸಂಖ್ಯೆಯು ರಾಜ್ಯದಲ್ಲಿ ಏರಿಕೆ ಕಂಡರೆ ಮತ್ತೆ ವೀಕೆಂಡ್ ಕರ್ಫ್ಯೂ (weekend curfew) ವಿಧಿಸಲಾಗುವುದು.
- ನೈಟ್ ಕರ್ಫ್ಯೂ (night curfew) ಯಥಾ ಪ್ರಕಾರ ಜಾರಿಯಲ್ಲಿ ಇರಲಿದೆ. ಹೀಗಾಗಿ, ಸಂಚಾರಕ್ಕೆ ನಿರ್ಬಂಧವಿರಲಿದೆ.
- ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮಗಳನ್ನು ಮಾಡಬೇಕಾದರೆ ಅದಕ್ಕೆ 50-50 ನಿಯಮ ಅನ್ವಯವಾಗಲಿದೆ.
https://www.suddikanaja.com/2021/09/10/bheemeshwar-temple/