ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿ ಬೆಳ್ಳಬೆಳಗ್ಗೆ ಫುಲ್ ಟ್ರಾಫಿಕ್ ಜಾಮ್

ಸುದ್ದಿ ಕಣಜ.ಕಾಂ | CITY | CITIZEN VOICE
ಶಿವಮೊಗ್ಗ: ನಗರದ ಬಾಲರಾಜ್ ರಸ್ತೆಯಲ್ಲಿ ಗುರುವಾರ ಬೆಳ್ಳಬೆಳಗ್ಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡಿದರು.
ಕೋರ್ಟ್ ವೃತ್ತದಿಂದ ಗೋಪಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಡಾಂಬಾರು ಹಾಕುತ್ತಿರುವುದರಿಂದ ಒಂದು ಕಡೆಯ ರಸ್ತೆಯಲ್ಲಿ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿದ್ದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಆಗಿತ್ತು.

READ | ಗಾಜನೂರು ಬಳಿ ತುಂಗಾ ಎಡ ನಾಲೆಗೆ ಬಿದ್ದ ಕಾರು, ಸಹಾಯಕ್ಕಾಗಿ ಕಿರುಚಿದರೂ ಆಗಲಿಲ್ಲ ಪ್ರಯೋಜನ

ಕಚೇರಿಗೆ ಹೋಗುವ ವೇಳೆಯಲ್ಲೇ ರಸ್ತೆ ಕಾಮಗಾರಿ
ಸಾಮಾನ್ಯವಾಗಿ ಬೆಳಗ್ಗೆ 9.30ಯಿಂದ 10.30ವರೆಗೆ ಸಾರ್ವಜನಿಕರು ಕಚೇರಿ, ಶಾಲಾ, ಕಾಲೇಜುಗಳಿಗೆ ಹೋಗುತ್ತಾರೆ. ಹೀಗಾಗಿ, ಈ ಅವಧಿಯಲ್ಲಿ ಅಧಿಕ ಜನಸಂಚಾರ ಇರುತ್ತದೆ. ಇದೇ ಸಮಯದಲ್ಲಿ ರಸ್ತೆಗೆ ಡಾಂಬಾರು ಹಾಕುತ್ತಿದ್ದರಿಂದ ಭಾರಿ ಸಂಚಾರ ದಟ್ಟಣೆ ಆಗಿತ್ತು. ಒಂದು ಕಡೆ ರಸ್ತೆ ಬಂದ್ ಮಾಡಿದ್ದು ಬಸ್ ಸೇರಿದಂತೆ ದೊಡ್ಡ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯಾದರೂ ಮಾಡಬೇಕಿತ್ತು. ಆದರೆ, ಅದನ್ನು ಮಾಡಲಾಗಿಲ್ಲ. ಈ ಕಾರಣಕ್ಕೆ ದ್ವಿಚಕ್ರ ವಾಹನ, ಆಟೋ, ಕಾರುಗಳು ಸಂಚರಿಸಲಾಗದೇ ಟ್ರಾಫಿಕ್ ನಲ್ಲಿ ಸಿಲುಕಿದ್ದರು. ಜನರು ಹಿಡಿ ಶಾಪ ಹಾಕುತ್ತಲೇ ಟ್ರಾಫಿಕ್ ನಲ್ಲಿ ನಿಲ್ಲುವುದು ಅನಿವಾರ್ಯವಾಗಿತ್ತು. ಆಡಳಿತ ವರ್ಗ ಇದರೆಡೆಗೆ ಗಮನ ಹರಿಸಬೇಕಾದ ಅಗತ್ಯವಿದೆ.

https://www.suddikanaja.com/2021/06/07/parking-marking-in-neharu-road/