ಸುದ್ದಿ ಕಣಜ.ಕಾಂ | TALUK | CRIME NEWS
ಹೊಸನಗರ: ತನ್ನ 3 ವರ್ಷದ ಮಗುವನ್ನು ವೇಲ್ ನಿಂದ ಸೊಂಟಕ್ಕೆ ಕಟ್ಟಿಕೊಂಡು ಬಾವಿಗೆ ಜಿಗಿದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ರಿಪ್ಪನಪೇಟ್ ಸಮೀಪದ ಚಿಟೆಗದ್ದೆ ಬಿದರಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ಗ್ರಾಮದ ನಿವಾಸಿ ವಿದ್ಯಾ(35) ಅವರು ಮಗಳು ತನ್ವಿ (3)ಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
READ | ಚಲಿಸುತ್ತಿದ್ದ ಬಸ್ ಹೋದ ವಿದ್ಯಾರ್ಥಿ ಕೆಳಗೆ ಬಿದ್ದ ವಿಡಿಯೋ ವೈರಲ್
ದೂರಿನಲ್ಲಿ ಗಂಡನ ಮನೆಯವರ ಮೇಲೆ ಆರೋಪ
ಶಿಕಾರಿಪುರ ತಾಲ್ಲೂಕಿನ ಸಿದ್ದಾಪುರ ಗ್ರಾಮದ ವಾಸಿಯೊಬ್ಬರು ತನ್ನ ಮಗಳು ವಿದ್ಯಾ ಅವರನ್ನು ಚಿಟೆಗದ್ದೆ ಬಿದರಳ್ಳಿ ಗ್ರಾಮದ ಲೋಹಿತ್ ಎಂಬುವವರೊಂದಿಗೆ 2014ರಲ್ಲಿ ವಿವಾಹ ಮಾಡಿದ್ದಾರೆ. ಅವರಿಗೆ 6 ವರ್ಷದ ಹಾಗೂ 3 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಂತರದ ದಿನಗಳಲ್ಲಿ ಲೋಹಿತ್, ಆತನ ತಂದೆ ನಾಗೇಶಪ್ಪ, ತಾಯಿ ಭಾಗ್ಯಮ್ಮ, ಸಹೋದರಿ ಶೋಭಾ ಅವರು ಸೇರಿಕೊಂಡು ಸಣ್ಣಪುಟ್ಟ ವಿಚಾರಕ್ಕೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಈ ವಿಚಾರವಾಗಿ ಆಕೆಯು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 498(ಎ), 306 ಸಹಿತ 34 ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.