ಕೋವಿಡ್ ಲಸಿಕೆ ಪಡೆದ ಎಷ್ಟು ದಿನಗಳ ನಂತರ ಕೆ.ಎಫ್.ಡಿ. ಲಸಿಕೆ ಪಡೆಯಬಹುದು, ಮಂಗನ ಕಾಯಿಲೆ ಬಗ್ಗೆ ಡಿಸಿ ಪ್ರಮುಖ ಮೀಟಿಂಗ್, ಇಲ್ಲಿವೆ ಟಾಪ್ 8 ಪಾಯಿಂಟ್ಸ್

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ನಗರದ ಜಿಲ್ಲಾಧಿಕಾರಿಯಲ್ಲಿ ಕೆ.ಎಫ್.ಡಿ (kyasanur forest disease) ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯು ಸೋಮವಾರ ಜರುಗಿತು.

READ | ಹಿಜಾಬ್ ವಿವಾದ, ಶಿವಮೊಗ್ಗದಲ್ಲಿ ಲಾಠಿ ಚಾರ್ಜ್, ಕಲ್ಲು ತೂರಾಟ, ಉದ್ವಿಗ್ನ ಸ್ಥಿತಿ, ಸ್ಥಳದಲ್ಲೇ ಬೀಡು ಬಿಟ್ಟ ಡಿಸಿ, ಎಸ್‍ಪಿ

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದ್ದೇನು?

  1. ಈಗಾಗಲೇ ಗುರುತಿಸಲಾಗಿರುವ ಹಾಟ್ ಸ್ಪಾಟ್ (hot spot) ಗಳಲ್ಲಿ ಪ್ರತಿಯೊಬ್ಬರಿಗೂ ಲಸಿಕೆ (Vaccination) ನೀಡಬೇಕು. ಈ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅರಣ್ಯ ಇಲಾಖೆ ಸಿಬ್ಬಂದಿಗೆ ಕಡ್ಡಾಯವಾಗಿ ಲಸಿಕೆ ಹಾಕಬೇಕು.
  2. ಮಂಗ ಸತ್ತಿರುವುದು ಕಂಡು ಬಂದರೆ ತಕ್ಷಣ ಮಾಹಿತಿ ನೀಡಬೇಕು. ಸತ್ತ ಪ್ರತಿಯೊಂದು ಮಂಗದಿಂದ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು.
  3. ಕ್ಯಾಸನೂರು ಕಾಡಿನ ಕಾಯಿಲೆ(KFD)ಯ ನಿಯಂತ್ರಣ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ಮತ್ತಷ್ಟು ಚುರುಕುಗೊಳಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಲಸಿಕೆಯ ಗುಣಮಟ್ಟ ಹಾಗೂ ಪರಿಣಾಮಕಾರಿ ನಿಯಂತ್ರಣ ಚಟುವಟಿಕೆಗಳ ಅನುಷ್ಠಾನಕ್ಕೆ ಸಾಕ್ಷಿಯಾಗಿದೆ.
ಕೆಎಫ್.ಡಿ ಕುರಿತು ನಡೆದ ಸಭೆಯಲ್ಲಿ ಡಿಸಿ ಡಾ.ಸೆಲ್ವಮಣಿ ಮಾತನಾಡಿದರು.

ಡಿಎಚ್.ಒ ಡಾ.ರಾಜೇಶ್ ಸುರಗಿಹಳ್ಳಿ ಹೇಳಿದ್ದೇನು?

  1. ಎನ್.ಐ.ವಿ( National Institute of Virology) ಪುಣೆ (pune)ಯವರು ಲಸಿಕಾ ಗುಣಮಟ್ಟ ಉತ್ತಮವಾಗಿಲ್ಲದಿರುವ ಬಗ್ಗೆ ಯಾವುದೇ ವರದಿ ನೀಡಿರುವುದಿಲ್ಲ.
  2. ಜಿಲ್ಲೆಯಲ್ಲಿ 2019ರಲ್ಲಿ 4956 ಮಾದರಿ ಪರೀಕ್ಷೆ ನಡೆಸಲಾಗಿದ್ದು, 445 ಕೆಎಫ್.ಡಿ ಪ್ರಕರಣಗಳು ದೃಢಪಟ್ಟು 15 ಮಂದಿ ಸಾವನ್ನಪ್ಪಿದ್ದರು. 1,15,957 ಮಂದಿಗೆ ಲಸಿಕೆ ಹಾಗೂ 37869 ಡಿಪಿಎಂ ತೈಲ ವಿತರಣೆ ಮಾಡಲಾಗಿತ್ತು.
  3. 2020ರಲ್ಲಿ 6975 ಮಾದರಿ ಪರೀಕ್ಷೆ ನಡೆಸಲಾಗಿದ್ದು, 287 ಕೆಎಫ್.ಡಿ ಪ್ರಕರಣಗಳು ದೃಢಪಟ್ಟು 5 ಮಂದಿ ಸಾವನ್ನಪ್ಪಿದ್ದರು. 106862 ಮಂದಿಗೆ ಲಸಿಕೆ ಹಾಗೂ 81995 ಡಿಪಿಎಂ ತೈಲ ವಿತರಣೆ ಮಾಡಲಾಗಿತ್ತು.
  4. 2021ರಲ್ಲಿ 4211 ಮಾದರಿ ಪರೀಕ್ಷೆ ನಡೆಸಲಾಗಿದ್ದು, 23 ಕೆಎಫ್‍ಡಿ ಪ್ರಕರಣಗಳು ದೃಢಪಟ್ಟು ಸಾವು ಸಂಭವಿಸಿಲ್ಲ. 132769 ಮಂದಿಗೆ ಲಸಿಕೆ ಹಾಗೂ 89720 ಡಿಪಿಎಂ ತೈಲ ವಿತರಣೆ ಮಾಡಲಾಗಿತ್ತು.
  5. ಪ್ರಸ್ತುತ ವರ್ಷ 350 ಮಾದರಿ ಪರೀಕ್ಷೆ ನಡೆಸಲಾಗಿದ್ದು, 3 ಪ್ರಕರಣಗಳು ದೃಢಪಟ್ಟಿವೆ. ಯಾವುದೇ ಸಾವು ಸಂಭವಿಸಿರುವುದಿಲ್ಲ. ಇದುವರೆಗೆ 69991 ಮಂದಿಗೆ ಲಸಿಕೆ ಹಾಗೂ 21450 ಡಿಪಿಎಂ ತೈಲ ವಿತರಣೆ ಮಾಡಲಾಗಿದೆ.

READ | ಹೊಳೆಹೊನ್ನೂರಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬುಲೆರೋ ಕಳವು

ಕೋವಿಡ್ ಲಸಿಕೆ ಪಡೆದ 2 ವಾರಗಳ ನಂತರ ಕೆಎಫ್.ಡಿ ಲಸಿಕೆ ಪಡೆಯಬಹುದು
ಕ್ಯಾಸನೂರು ಕಾಡಿನ ಕಾಯಿಲೆಯ ಲಸಿಕೆಯನ್ನು 20 ವರ್ಷಗಳಿಂದ ಐಎಎಚ್.ವಿಬಿ (Institute of Animal Health and Veterinary Biologicals) ಬೆಂಗಳೂರಿನಲ್ಲಿ ತಯಾರಿಸಲಾಗುತ್ತಿದ್ದು, ಹಾಲಿ 50 ಸಾವಿರ ಲಸಿಕೆ ತಯಾರಾಗಿರುತ್ತದೆ. ಸದರಿ ಲಸಿಕೆಯ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಉಪಯೋಗಕ್ಕೆ ಲಭ್ಯವಾಗಲಿದೆ. ಮಾರ್ಗಸೂಚಿ ಪ್ರಕಾರ ಕೋವಿಡ್ ಲಸಿಕೆ ಪಡೆದ ಎರಡು ವಾರಗಳ ನಂತರ ಲಭ್ಯವಿರುವ ಕೆಎಫ್.ಡಿ ಲಸಿಕೆಯನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು. ಜಿಲ್ಲೆಯಲ್ಲಿ ಬಿಎಸ್.ಎಲ್-2 ಶ್ರೇಣಿಯ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಬಿಎಸ್.ಎಲ್-3 ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಡಿಎಚ್.ಒ ಹೇಳಿದರು.

ಆರ್.ಸಿ.ಎಚ್ ಡಾ.ನಾಗರಾಜ್ ನಾಯಕ್, ಡಾ.ಅರುಣ್ ಕುಮಾರ್ ಸೇರಿದಂತೆ ಹಿರಿಯ ವೈದ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

https://www.suddikanaja.com/2021/07/24/air-bus-facility-in-shivamogga-airport-said-bs-yadiyurappa/