ಸುದ್ದಿ ಕಣಜ.ಕಾಂ | DISTRICT | TIGER CENSUS
ಶಿವಮೊಗ್ಗ: ಜಿಲ್ಲೆಯಲ್ಲಿ ಹುಲಿ ಗಣತಿ ಫೆಬ್ರವರಿ 10ರಿಂದ ಆರಂಭಗೊಂಡಿದ್ದು, ಫೆ.28ರ ವರೆಗೆ ನಡೆಯಲಿದೆ. ಈಗಾಗಲೇ ಇದಕ್ಕಾಗ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಹುಲಿ ಗಣತಿ ನಡೆಯುತ್ತದೆ. ಈ ವೇಳೆ ವ್ಯಾಘ್ರನಷ್ಟೇ ಅಲ್ಲದೇ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗುವ ಪ್ರಾಣಿಗಳನ್ನು ದಾಖಲಿಸಲಾಗುತ್ತದೆ. ಫೆ.10ರಿಂದ 18ರ ವರೆಗೆ ಮೊದಲ ಹಂತ ಹಾಗೂ 19ರಿಂದ 28ರ ವರೆಗೆ ಎರಡನೇ ಹಂತದ ಸಮೀಕ್ಷೆ ನಡೆಯಲಿದೆ.
ಹೇಗೆ ನಡೆಯುತ್ತೆ ಹುಲಿ ಗಣತಿ?
- ಹುಲಿಗಳ ಸಂಖ್ಯೆಯನ್ನು ತಿಳಿದುಕೊಳ್ಳುವುದಕ್ಕಾಗಿ ನಿರಂತರವಾಗಿ ನಡೆಯುವ ಪ್ರಕ್ರಿಯೆ ಇದಾಗಿದೆ. ಜಿಲ್ಲೆಯಲ್ಲಿ ಹುಲಿಗಳು ಕಂಡುಬರುವ ಸೂಕ್ಷ್ಮ ಪ್ರದೇಶಗಳಲ್ಲಿ ಟ್ರ್ಯಾಪ್ ಕ್ಯಾಮೆರಾಗಳನ್ನು ಹಾಕಿ ಅದರಲ್ಲಿ ದಾಖಲಾಗುವ ಚಿತ್ರಗಳ ಮೂಲಕ ಹುಲಿಗಳ ಸಂಖ್ಯೆಯನ್ನು ಗಣತಿ ಮಾಡಲಾಗುತ್ತದೆ.
- ಆಯಾ ವಲಯ ಅರಣ್ಯ ವ್ಯಾಪ್ತಿಯಲ್ಲಿ 3ರಿಂದ 10 ಕ್ಯಾಮೆರಾಗಳನ್ನು ಅಲ್ಲಲ್ಲಿ ಅಳವಡಿಸಲಾಗುತ್ತದೆ.
- ಪ್ರತಿ ನಾಲ್ಕೈದು ದಿನಗಳಿಗೊಮ್ಮೆ ಕ್ಯಾಮೆರಾದಲ್ಲಿರುವ ಚಿಪ್ ಅನ್ನು ಹೊರಗಡೆ ತೆಗೆದು ಚಿತ್ರಗಳನ್ನು ತೆಗೆದುಕೊಳ್ಳಲಾಗುತ್ತದೆ.
- ಟ್ರ್ಯಾಪ್ ಕ್ಯಾಮೆರಾದಲ್ಲಿ ಎದುರುಗಡೆ ಸಾಗುವ ಪ್ರತಿಯೊಂದರ ಚಿತ್ರವನ್ನು ದಾಖಲಾಗುತ್ತದೆ. ಪ್ರತಿ 5 ಸೆಕೆಂಡಿಗೊಮ್ಮೆ ಚಿತ್ರಗಳನ್ನು ಇದು ಕ್ಲಿಕ್ ಮಾಡುತ್ತದೆ. ಜೊತೆಗೆ, ಪ್ರಾಣಿ, ಪಕ್ಷಿ, ಮನುಷ್ಯ ಸಂಚಾರ, ಧ್ವನಿ ಕೇಳಿಸಿದರೂ ಕ್ಯಾಮೆರಾ ತನ್ನ ಕೆಲಸವನ್ನು ಮಾಡುತ್ತದೆ.
- ಇಂತಹ ಕ್ಯಾಮೆರಾಗಳನ್ನು ಬಂಡೆಗಲ್ಲು, ಮರದ ಮೇಲೆ ಅಳವಡಿಸಲಾಗುತ್ತದೆ.
ಹುಲಿ ಪ್ರೇಮಿಗಳಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್, ಕಳಚಿತು ಕೃತಿಕ ವಂಶದ ಇನ್ನೊಂದು ಕುಡಿ