ಸುದ್ದಿ ಕಣಜ.ಕಾಂ | DISTRICT | SHIVAMOGGA AIRPORT
ಶಿವಮೊಗ್ಗ: ಜಿಲ್ಲೆಯಿಂದ ಲೋಹದ ಹಕ್ಕಿ ಹಾರುವ ದಿನಾಂಕ ಫಿಕ್ಸ್ ಆಗಿದೆ. ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗುವ ಹಂತಕ್ಕೆ ಬಂದಿದ್ದು, ಡಿಸೆಂಬರ್ ನಿಂದ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಲೋಕಸಭೆ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.
READ | ಶಿವಮೊಗ್ಗದಿಂದ ದೇಶದ 11 ಮಾರ್ಗಗಳಲ್ಲಿ ವಿಮಾನ ಸಂಚಾರ, ಕೇಂದ್ರ ಸಚಿವರ ಭೇಟಿ ಮಾಡಿದ ಸಂಸದ ರಾಘವೇಂದ್ರ
ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಮೇ ಮತ್ತು ಜೂನ್ ಒಳಗೆ ರನ್ ವೇ ಕಾರ್ಯ ಪೂರ್ಣವಾಗಲಿದೆ. ಜುಲೈನಲ್ಲಿ ಟರ್ಮಿನಲ್ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.
ಡ್ರಾಫ್ಟ್ ಶೀಘ್ರವೇ ಸಿದ್ಧ, ಮಾರ್ಗಗಳು ನಿರ್ಧಾರ
ಶಿವಮೊಗ್ಗದಿಂದ ವಿಮಾನಗಳ ಮಾರ್ಗ ಕುರಿತಾದ ಪಟ್ಟಿಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ನೀಡಲಾಗಿದೆ. ವಿಮಾನಗಳ ಹಾರಾಟದ ಮಾರ್ಗಗಳು ಕೂಡ ಶೀಘ್ರ ನಿರ್ಧಾರವಾಗಲಿದ್ದು, ಈ ಸಂಬಂಧ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದರು.
ಭೇಟಿ ಬಳಿಕ ಕೇಂದ್ರ ಸಚಿವರು ತಕ್ಷಣ ದೂರವಾಣಿ ಮೂಲಕ ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದಾರೆ. ವಿಮಾನ ನಿಲ್ದಾಣದ ನಿರ್ವಹಣೆ ಕುರಿತು ಚರ್ಚೆ ನಡೆಯುತ್ತಿದ್ದು, ನಿರ್ವಹಣೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕೋ ಅಥವಾ ವಿಮಾನ ನಿಲ್ದಾಣ ಪ್ರಾಧಿಕಾರ ವಹಿಸಿಕೊಳ್ಳಬೇಕೆನ್ನುವ ಕುರಿತು ಚರ್ಚೆ ನಡೆದಿದೆ. ಮುಂದಿನ ವಾರ ಈ ಸಂಬಂಧ ಡ್ರಾಫ್ಟ್ ಸಿದ್ಧವಾಗಲಿದೆ ಎಂದು ಮಾಹಿತಿ ನೀಡಿದರು.
ಶಾಸಕ ಕೆ.ಬಿ. ಅಶೋಕ್ ನಾಯ್ಕ್. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮೇಯರ್ ಸುನೀತಾ ಅಣ್ಣಪ್ಪ, ಎನ್.ಜೆ.ನಾಗರಾಜ್, ಎಸ್.ಎನ್. ಚನ್ನಬಸಪ್ಪ, ಬಿ.ಆರ್. ಮಧುಸೂಧನ್, ಶಿವರಾಜ್, ಜಗದೀಶ್ ಉಪಸ್ಥಿತರಿದ್ದರು.
https://www.suddikanaja.com/2021/08/22/shivamogga-airport-work/