ಸುದ್ದಿ ಕಣಜ.ಕಾಂ | DISTRICT | COLLEGE HOLIDAY
ಶಿವಮೊಗ್ಗ: ಹಿಜಾಬ್, ಕೇಸರಿ ವಿವಾದ ಹಿನ್ನೆಲೆ ಸೂಕ್ಷ್ಮ ಕಾಲೇಜುಗಳಿಗೆ ಫೆಬ್ರವರಿ 16ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ.
ಬಾಪೂಜಿ ನಗರದ ಪದವಿ ಕಾಲೇಜು, ಸೈನ್ಸ್ ಮೈದಾನದ ಬಳಿಯ ಸರ್ಕಾರಿ ಪಿಯು ಕಾಲೇಜು ಹಾಗೂ ಸಾಗರದ ಸರ್ಕಾರಿ ಪಿಯು ಕಾಲೇಜಿಗೆ ರಜೆ ಘೋಷಿಸಲಾಗಿದೆ.
READ | ಶಿವಮೊಗ್ಗ ನಗರದಲ್ಲಿ ನಾಲ್ಕು ದಿನ ನಿಷೇಧಾಜ್ಞೆ ಜಾರಿ, ಯಾವಾಗಿಂದ ಅನ್ವಯ, ಆದೇಶದಲ್ಲೇನಿದೆ?
ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆಯನ್ನು ಫೆಬ್ರವರಿ 19ರ ರಾತ್ರಿ 9 ಗಂಟೆವರೆಗೆ ವಿಧಿಸಲಾಗಿದೆ. ಹೀಗಾಗಿ, ಶಾಲಾ ಕಾಲೇಜುಗಳ ಆವರಣದಿಂದ 200 ಮೀಟರ್ ಒಳಗಡೆ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.