ಸುದ್ದಿ ಕಣಜ.ಕಾಂ | CITY | POLITICAL NEWS
ಶಿವಮೊಗ್ಗ: ರಾಷ್ಟ್ರಧ್ವಜಕ್ಕೆ ಅವಮಾನಿಸಿದ ಹಾಗೂ ಸದನದಲ್ಲಿ ಅಸಂವಿಧಾನಿಕ ತೋರಿದ ಸಚಿವ ಈಶ್ವರಪ್ಪ ಅವರನ್ನು ವಜಾ ಮಾಡಲು ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ನಗರದ ಬಿಜೆಪಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದ 40ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಗುರುವಾರ ವಶಕ್ಕೆ ಪಡೆಯಲಾಯಿತು.
ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಂವಿಧಾನಾತ್ಮಕವಾದ ಸ್ಥಾನದಲ್ಲಿದ್ದು ರಾಷ್ಟ್ರಧ್ವಜಕ್ಕೆ ಅವಮಾನಿಸಿರುವುದು ಹಾಗೂ ರಾಜ್ಯದ ದೇಗುಲ ವಿಧಾನಸೌಧದಲ್ಲಿ ಅಸಂವಿಧಾನಿಕ ಪದಪ್ರಯೋಗ, ಏಕವಚನ ಹಾಗೂ ಏರುಧ್ವನಿಯಲ್ಲಿ ಮಾತನಾಡಿರುವುದು ಅವರ ಸ್ಥಾನಕ್ಕೆ ಶೋಭೆ ತರುವಂತದ್ದಲ್ಲ ಎಂದು ಆರೋಪಿಸಿದ್ದಾರೆ.
READ | ನಾಯಿ ಕಟ್ಟುವ ವಿಚಾರದಲ್ಲಿ ಕಿರಿಕ್, ದಂತ ವೈದ್ಯೆ ಮೇಲೆ ಹಲ್ಲೆ, ಕಾರಿನ ಗಾಜು ಪೀಸ್ ಪೀಸ್
ಸಂವಿಧಾನದ ಆಶಯದಂತೆ ಪ್ರಮಾಣವಚನ ಸ್ವೀಕರಿಸಿರುವ ಸಚಿವ ಈಶ್ವರಪ್ಪ ಅವರು ದೇಶದ ಭಾವೈಕ್ಯತೆಗೆ ಧಕ್ಕೆ ಉಂಟು ಮಾಡುವ ಪ್ರಚೋದನ ಕಾರಿ ಹೇಳಿಕೆಗಳನ್ನು ನೀಡುತ್ತಾ ದೇಶದ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವುದು ಬಿಜೆಪಿಯ ಸಂವಿಧಾನ ವಿರೋಧಿ ಸಂಸ್ಕೃತಿ ಎದ್ದು ತೋರುತ್ತದೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ.ಗಿರೀಶ್, ರಾಜ್ಯ ಯುವ ಕಾಂಗ್ರೆಸ್ ಮುಖಂಡ ಟಿವಿ ರಂಜಿತ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಲೋಕೇಶ್ ಪಾಲ್ಗೊಂಡಿದ್ದರು.
https://www.suddikanaja.com/2021/10/30/vehicle-ownersno-need-to-come-to-rto-office-for-new-vehicle-registration/