ಸುದ್ದಿ ಕಣಜ.ಕಾಂ | TALUK | PROTEST
ಸೊರಬ: ಭಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಎಂ.ಎಸ್. ಕಾಳಿಂಗರಾಜ್ ಮಾತನಾಡಿ, ದೇಶದ ಶಾಂತಿ ಕದಡುವ ಯತ್ನ ಇದಾಗಿದೆ. ದೇಶ ವಿರೋಧಿ ಕೃತ್ಯದಲ್ಲಿ ತೊಡಗಿರುವ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು. ಹತ್ಯೆಗೀಡಾದ ಹರ್ಷ ಕುಟುಂಬಸ್ಥರಿಗೆ ಸರ್ಕಾರ 20 ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ಪರಿಹಾರವಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
RELATED NEWS
ಭಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ, ಬಂಧಿತರ ಹೆಸರು ರಿಲೀಸ್
ಶಿವಮೊಗ್ಗದಲ್ಲಿ ಕರ್ಫ್ಯೂ ಜಾರಿ, ಹೊರಗೆ ಬರುವಂತಿಲ್ಲ, ಏನೇನು ನಿರ್ಬಂಧ?
ನಾಳೆಯೂ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ
ಭಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ, ಇಬ್ಬರನ್ನು ವಶಕ್ಕೆ ಪಡೆದ ಪೊಲೀಸ್
ಅಂಗಡಿಗಳ ಮೇಲೆ ಕಲ್ಲು ತೂರಾಟ, ಶಿವಮೊಗ್ಗದಲ್ಲಿ ಉದ್ವಿಗ್ನ ಸ್ಥಿತಿ, ಶವಯಾತ್ರೆ ವೇಳೆ ಗಲಾಟೆ
ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ, ಪರಿಸ್ಥಿತಿ ತಹಬದಿಗೆ ಐಜಿ ದೌಡು
ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ
ನಾಳೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ
ಶಿವಮೊಗ್ಗ ನಗರದಾದ್ಯಂತ ಖಾಕಿ ಹೈ ಅಲರ್ಟ್, ಕೆಲವೆಡೆ ಲಘು ಲಾಠಿ ಪ್ರಹಾರ
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಮಾತನಾಡಿ, ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಬೇಕಾದ ತುರ್ತು ಅಗತ್ಯವಿದೆ. ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆಯಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ತಕ್ಷಣವೇ ಅವರನ್ನು ಬಂಧಿಸಬೇಕು. ಕೃತ್ಯಕ್ಕೆ ಸಹಕಾರ ನೀಡಿದವರನ್ನು ಜೊತೆಗೆ ಸಮರ್ಥನೆ ಮಾಡಿಕೊಳ್ಳುತ್ತಿರುವವರನ್ನು ಬಂಧಿಸಬೇಕು. ಕೃತ್ಯದಲ್ಲಿ ತೊಡಗಿದವರಿಗೆ ಅತ್ಯುಗ್ರವಾದ ಗಲ್ಲು ಶಿಕ್ಷೆಯನ್ನು ವಿಧಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಎಚ್.ಎಲ್. ಚಂದನ್, ತಾಲೂಕು ಉಪಾಧ್ಯಕ್ಷ ಹರೀಶ್ ಭಟ್, ನಗರ ಕಾರ್ಯದರ್ಶಿ ರವಿ ಗುಡಿಗಾರ್, ಬಜರಂಗದಳ ತಾಲೂಕು ಸಂಚಾಲಕ ರಂಗನಾಥ ಮೊಗವೀರ್, ನಗರ ಸಂಚಾಲಕ ಬಿ. ಶಶಿಕುಮಾರ್, ಕಾರ್ಯಕರ್ತರಾದ ಲೋಕೇಶ್, ಅರುಣ್ ಕುಮಾರ್, ಆನಂದ, ರೋಹಿತ್, ಕಾರ್ತಿಕ್, ರಾಘು, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಮುಖಂಡರಾದ ಎಂ.ಕೆ. ಯೋಗೇಶ್, ದೇವೇಂದ್ರಪ್ಪ, ಸಂಜೀವ್ ಆಚಾರ್, ಮೋಹನ್ ಹಿರೇಶಕುನ, ಆಶೀಕ್ ನಾಗಪ್ಪ, ಪ್ರಸನ್ನ ಶೇಟ್, ಸುನೀಲ್ ಬರದವಳ್ಳಿ, ರಾಜು, ರಮೇಶ್, ಮಂಜುನಾಥ್, ಕನಕದಾಸ ಕಲ್ಲಬಿ, ಅಶೋಕ್ ಶೇಠ್, ಶಿವಕುಮಾರ್ ಉಪಸ್ಥಿತರಿದ್ದರು.
https://www.suddikanaja.com/2022/02/21/harshas-murder-case-rdpr-minister-ks-eshwarappa-seeks-nia-probe/