ಸುದ್ದಿ ಕಣಜ.ಕಾಂ | DISTRICT | CYBER CRIME
ಶಿವಮೊಗ್ಗ: ಮಕ್ಕಳ ಅಶ್ಲೀಲತೆ ಮತ್ತು ಲೈಂಗಿಕ ವಿಡಿಯೋ ಅಪ್ ಲೋಡ್ ಮಾಡಿದ್ದಾರೆಂಬ ಆರೋಪದ ಮೇರೆಗೆ ಸಾಗರ ಮೂಲದ ವ್ಯಕ್ತಿಯೊಬ್ಬರ ವಿರುದ್ಧ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
READ | ಉಕ್ರೇನ್ ನಲ್ಲಿ ಶಿವಮೊಗ್ಗದ ಇಬ್ಬರು, ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?
ಫೆಬ್ರವರಿ 17ರಂದು ಬೆಂಗಳೂರು ಸಿಐಡಿ ವಿಶೇಷ ಘಟಕದಿಂದ ಅಂಚೆ ಲಕೋಟೆಯನ್ನು ಸಿಇಎನ್ ಪೊಲೀಸರು ಸ್ವೀಕರಿಸಿದ್ದು, ಅದರಲ್ಲಿ ಮಕ್ಕಳ ಅಶ್ಲೀಲತೆಯ ಬಗ್ಗೆ ದೂರು ದಾಖಲಿಸಲು ಸೂಚಿಸಿದ ಜ್ಞಾಪನ ಪತ್ರ ಮತ್ತು ಸೈಬರ್ ಟಿಪ್ ಲೈನ್ ಸಿಡಿ ಪ್ರಮಾಣ ಪತ್ರ ಇತ್ತು. ಅದರನ್ವಯ ಮಾಹಿತಿಯನ್ನು ಪರಿಶೀಲಿಸಲಾಗಿದೆ. ಪ್ರಾಥಮಿಕ ವಿಚಾರಣೆ ಮಾಡಿ, ಸಿಡಿಯಲ್ಲಿರುವ ಮಾಹಿತಿಯನ್ನು ದೃಢಪಡಿಸಿಕೊಂಡು ಆರೋಪಿಯ ವಿಳಾಸವನ್ನು ಪರಿಶೀಲಿಸಿದ ಬಳಿಕ ಫೆ.18ರಂದು ಐಟಿ ಕಾಯ್ದೆ ಅನ್ವಯ ಸ್ವಯಂ ಪ್ರೇರಿತ ಎಫ್.ಐ.ಆರ್. ದಾಖಲಿಸಲಾಗಿದೆ.
ಬೆಂಗಳೂರಿನ ಸಿಐಡಿ ವಿಶೇಷ ಘಟಕದವರು ದೂರು ದಾಖಲಿಸಲು ನೀಡಿದ ಜ್ಞಾಪನ ಪತ್ರವನ್ನು ಮತ್ತು ಸಿಡಿಯಲ್ಲಿದ್ದ ಆರೋಪಿಯ ಇನ್ ಸ್ಟಾಗ್ರಾಂ ವಿಡಿಯೋ ಹಾಕಿದ ಬಗ್ಗೆ ಇರುವ ಐಪಿ ವಿಳಾಸದ ಮಾಹಿತಿಯನ್ನು ಮುದ್ರಿಸಿ ಎಫ್.ಐ.ಆರ್.ನೊಂದಿಗೆ ನ್ಯಾಯಾಲಯಕ್ಕೆ ನಿವೇದಿಸಲಾಗಿರುತ್ತದೆ.
https://www.suddikanaja.com/2021/01/05/crop-survey-by-farmers/