ಸುದ್ದಿ ಕಣಜ.ಕಾಂ | DISTRICT | SCHOOL, COLLEGE RE OPEN
ಶಿವಮೊಗ್ಗ: ನಗರ ವ್ಯಾಪ್ತಿಯ ಶಾಲೆಗಳು ಸೋಮವಾರದಿಂದ ಪುನರಾರಂಭಗೊಂಡಿದ್ದು, ನಿರಂತರ ರಜೆಗಳ ಬಳಿಕ ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರು ಆಗಿದ್ದಾರೆ.
READ | ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಕೆ, ಡಿಸಿ ಪರಿಷ್ಕೃತ ಆದೇಶ, ಎಲ್ಲಿಯವರೆಗೆ ಇರಲಿದೆ 144, ಏನೇನು ನಿರ್ಬಂಧ
ಹಿಜಾಬ್, ಹರ್ಷ ಕೊಲೆ ಪ್ರಕರಣ ನಂತರದ ಬೆಳವಣಿಗೆಗಳಿಂದಾಗಿ ಭಯಗೊಂಡಿರುವ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದಾರೆ. ಹಲವೆಡೆ ಮಕ್ಕಳನ್ನು ಖುದ್ದು ಪೋಷಕರೇ ಶಾಲೆಗಳವರೆಗೆ ಬಂದು ಬೆಳಗ್ಗೆ ಬಿಟ್ಟು ಹೋದ ದೃಶ್ಯಗಳು ಕಂಡುಬಂದವು.
ಶಾಲೆಗಳಲ್ಲಿ ಹಾಜರಾತಿ ಕಡ್ಡಾಯವಿಲ್ಲದೇ ಇರುವುದರಿಂದ ಕೆಲವೆಡೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಡಿವಿಎಸ್, ಎಟಿಎನ್.ಸಿಸಿ, ಫಸ್ಟ್ ಗ್ರೇಡ್ ಕಾಲೇಜು ಮತ್ತು ಕೆಪಿಎಸ್ ಶಾಲೆಗಳಲ್ಲಿ ಪೊಲೀಸರ ಬಂದೋಬಸ್ತ್ ಇದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್.ಆರ್.ಪಿ ತುಕ್ಕಡಿಯನ್ನು ನಿಯೋಜನೆ ಮಾಡಲಾಗಿದೆ. ತರಗತಿಗಳು ಇದುವರೆಗೆ ಸುಸೂತ್ರವಾಗಿ ನಡೆದಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ವರದಿಯಾಗಿಲ್ಲ.