ಸುದ್ದಿ ಕಣಜ.ಕಾಂ | DISTRICT | TALENT JUNCTION
ಶಿವಮೊಗ್ಗ: ಎರಡು ವರ್ಷದ ಪುಟಾಣಿಯೊಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರುವ ಮೂಲಕ ಸಾಧನೆ ಮಾಡಿದೆ.
READ | ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ರೈತರಿಗೆ ಶಿವರಾತ್ರಿ ಗಿಫ್ಟ್ ನೀಡಿದ ಶಿಮೂಲ್, ಒಕ್ಕೂಟ ಕೈಗೊಂಡ ತೀರ್ಮಾನಗಳೇನು?
ಈ ಸಾಧಕರ ಪಟ್ಟಿ ಸೇರಿದ್ದು ಶಿವಮೊಗ್ಗದ ಎಂ.ಯು.ಸಂತೋಷ್, ದೀಪಾ ಅವರ ಪುತ್ರಿ ಎಂ.ಎಸ್.ಆದ್ಯ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಪಟ ಪಟ ಮಾತನಾಡುವ ಪುಟಾಣಿಯು ಪದಕಕ್ಕೆ ಕೊರಳೊಡ್ಡಿದೆ.
ಮಾಡಿರುವ ಸಾಧನೆ ಏನು?
5 ಆಕಾರ, 8 ಬಣ್ಣ, ಶರೀರದ 20 ಅಂಗಾಂಗಗಳ ಹೆಸರು, 6 ರಾಷ್ಟ್ರೀಯ ನಾಯಕರು, 17 ವಾಹನ, 11 ಸಾಕು ಪ್ರಾಣಿ, 12 ಪಕ್ಷಿ, 13 ತರಕಾರಿ, 15 ರಾಷ್ಟ್ರ ಧ್ವಜಗಳ ಹೆಸರು ಹಾಗೂ ಇಂಗ್ಲಿಷ್ ನ ಅಫ್ಲಬೆಟ್ಸ್ ಗಳನ್ನು ಹೇಳುತ್ತೆ ಈ ಪುಟಾಣಿ. ಇದನ್ನು ಮನಗಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್ ಆಯ್ಕೆ ಮಾಡಲಾಗಿದೆ.