ಸುದ್ದಿ ಕಣಜ.ಕಾಂ | NATIONAL | JOB JUNCTION
ಬೆಂಗಳೂರು: ಒಡಿಶಾದ ಭುವನೇಶ್ವರದಲ್ಲಿರುವ ಪೂರ್ವ ಕರಾವಳಿ ರೈಲ್ವೆ ನೇಮಕಾತಿ ಸೆಲ್ ನಿಂದ 756 ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಹೊಂದಿರಬೇಕಾದ ವಯೋಮಿತಿ
ಅರ್ಜಿ ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕನಿಷ್ಠ 15 ವರ್ಷ ತುಂಬಿರಬೇಕು. ಗರಿಷ್ಠ 24 ವರ್ಷವಿರಬೇಕು. ವರ್ಗವಾರು ವಯೋಮಿತಿ ಸಡಿಲಿಕೆ ನೀಡಲಾಗಿದೆ. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನರಿಗೆ 10 ವರ್ಷಗಳ ಸಡಿಲಿಕೆ ನೀಡಲಾಗಿದೆ. ಇನ್ನುಳಿದ ವಯೋಮಿತಿ ಸಡಿಲಿಕೆ ನಿಯಮಾನುಸಾರ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ನೀಡಲಾಗಿದೆ.
READ | Karnataka KSP Recruitment ಡಿಗ್ರಿ ಪಾಸ್ ಆದವರಿಗೆ KSISF ನಲ್ಲಿ 63 ಎಸ್ಐ ಹುದ್ದೆ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 08-02-2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 07-03-2022
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಕ್ಯಾರಿಯೇಜ್ ರಿಪೇರ್ ವರ್ಕ್ಶಾಪ್ ಮಚೇಶ್ವರ್, ಭುವನೇಶ್ವರ್ | 190 |
ಖುರ್ದಾ ರೋಡ್ ಡಿವಿಷನ್ | 237 |
ವಾಲ್ ಟೈರ್ ಡಿವಿಷನ್ | 263 |
ಸಂಬಲ್ ಪುರ್ ಡಿವಿಷನ್ | 66 |
ಒಟ್ಟು | 756 |
ಎಸ್ಸೆಸ್ಸೆಲ್ಸಿ/ ಐಟಿಐನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಾಮಾನ್ಯ, ಓಬಿಸಿ ಅಭ್ಯರ್ಥಿಗಳಿಗೆ 100 ರೂಪಾಯಿ ಶುಲ್ಕ, ಎಸ್ಸಿ, ಎಸ್ಟಿ, ಅಂಗವಿಕಲರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಶುಲ್ಕವನ್ನು ಆನ್ ಲೈನ್ ಮೂಲಕವೇ ಪಾವತಿಸಬಹುದು.
NOTIFICATION CLICK HERE TO APPLY WEBSITE
https://www.suddikanaja.com/2021/12/19/jobs-on-iti-at-hindustan-aeronautics-limited/