ಶಾಲಾ, ಕಾಲೇಜು ಆರಂಭ ಬಗ್ಗೆ ಸಿಎಂ ಪ್ರಮುಖ ಸಭೆ, ಕೈಗೊಂಡ ನಿರ್ಧಾರವೇನು? ಅಹಿತಕರ ಘಟನೆ ತಡೆಗೆ ಸ್ಥಳೀಯ ಆಡಳಿತಕ್ಕೆ ಫುಲ್ ಪವರ್

 

 

ಸುದ್ದಿ ಕಣಜ.ಕಾಂ | KARNATAKA | CM MEETING
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ್ದು, ಕೆಳಗಿನ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಅದರ ಹೈಲೈಟ್ಸ್ ಇಲ್ಲಿವೆ.

READ | ಶಿವಮೊಗ್ಗದಲ್ಲಿ ಖಾಕಿ ರೌಂಡ್ಸ್, ಎಲ್ಲಿಂದ ಎಲ್ಲಿಯವರೆಗೆ ರೂಟ್ ಮಾರ್ಚ್?

  1. ಸೋಮವಾರದಿಂದ 10ನೇ ತರಗತಿವರಗೆ ಶಾಲೆಗಳು ಪುನಾರಂಭವಾಗಲಿವೆ. ಸೋಮವಾರದವರೆಗೆ ಪಿಯು ತರಗತಿ ಇರಲ್ಲ. ಪರಿಸ್ಥಿತಿ ಅವಲೋಕಿಸಿ ಸೂಕ್ತ ಕ್ರಮ
  2. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
  3. ಸೂಕ್ಷ್ಮ ಜಿಲ್ಲೆಗಳಲ್ಲಿ ಎಸ್‍ಪಿ, ಡಿಸಿಗಳು ಶಾಲೆ ಆವರಣಕ್ಕೆ ಭೇಟಿ ನೀಡಬೇಕು. ಶಾಲಾ ಆಡಳಿತದವರೊಂದಿಗೆ ಡಿಸಿ, ಎಸ್‍ಪಿ, ಡಿಡಿಪಿಐ ನಿರಂತರ ಸಂಪರ್ಕ ಹೊಂದಿರಬೇಕು.
  4. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಸೂಕ್ತ ಕ್ರಮ ಕೈಗೊಳ್ಳಿ. ಧಾರ್ಮಿಕ ಮುಖಂಡರು, ಸಂಘ, ಸಂಸ್ಥೆಯವರೊಂದಿಗೆ ಶಾಂತಿ ಸಭೆ ನಡೆಸಿ, ನ್ಯಾಯಾಲಯದ ಸೂಚನೆ ಅಕ್ಷರಶಃ ಪಾಲಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೇ ಸಣ್ಣ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು.
  5. ಆದ್ಯತೆಯ ಮೇರೆಗೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಹೊರಗಿನ ಪ್ರಚೋದನೆಗಳಿಗೆ ಒಳಗಾಗದಂತೆ ಸೂಕ್ತ ಕೈಗೊಳ್ಳಬೇಕು.
  6. ಜಿಲ್ಲೆಯ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಫೀಲ್ಡ್ ನಲ್ಲಿರಬೇಕು.
  7. ಸಾಮಾಜಿಕ ಮಾಧ್ಯಮ ವದಂತಿ, ಪ್ರಚೋದನಕಾರಿ ಸಂದೇಶ ಹರಡದಂತೆ ಸೂಕ್ತ ನಿಗಾ ವಹಿಸಬೇಕು. ಸಮಾಜಘಾತುಕ ಶಕ್ತಿಗಳನ್ನು ಗುರುತಿಸಿ ಕ್ರಮಕೈಗೊಳ್ಳಬೇಕು.
  8. ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಶೀಘ್ರವೇ ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಮೇಲಿನ ಆದೇಶಕ್ಕೆ ಕಾಯದೇ ತಕ್ಷಣ ಸ್ಥಳೀಯ ಆಡಳಿತವೇ ನಿರ್ಧಾರಕ್ಕೆ ಕೈಗೊಳ್ಳುವ ಪೂರ್ಣ ಅಧಿಕಾರ ನೀಡಲಾಗಿದೆ.
  9. ಮಾಧ್ಯಮದವರು ವಸ್ತುಸ್ಥಿತಿಯನ್ನು ಸರಿಯಾಗಿ ಪ್ರಸಾರ ಪಡಿಸಬೇಕು. ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಶಾಂತಿ ನೆಲೆಸಿದ್ದು ಅದನ್ನೂ ಫೋಕಸ್ ಮಾಡಬೇಕು.

https://www.suddikanaja.com/2022/01/19/corona-positive-cases-in-increasing-at-shivamogga-school-and-colleges/

error: Content is protected !!