‘ಓಲ್ಡ್ ಮಾಂಕ್’ ರಹಸ್ಯ ಬಿಚ್ಚಿಟ್ಟ ಡೈರೆಕ್ಟರ್ ಶ್ರೀನಿ, ಶಿವಮೊಗ್ಗ ಬಗ್ಗೆ ಹೇಳಿದ್ದೇನು?

 

 

ಸುದ್ದಿ ಕಣಜ.ಕಾಂ | KARNATAKA | ENTERTAINMENT NEWS
ಶಿವಮೊಗ್ಗ: ಫಸ್ಟ್ ಲುಕ್ ನಲ್ಲೇ ಫ್ಯಾನ್ಸ್ ಗಳನ್ನು ಫಿದಾ ಮಾಡಿರುವ ‘ಓಲ್ಡ್ ಮಾಂಕ್ (Old Monk)’ ಬಗ್ಗೆ ನಿರ್ದೇಶಕ, ನಾಯಕ ನಟ ಎಂ.ಜಿ.ಶ್ರೀನಿವಾಸ್ (MG Srinivas) ಹಲವು ವಿಚಾರಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.
ನಗರದ ಭಾರತ್ ಸಿನಿಮಾಸ್ (Bharat cinemas) ನಲ್ಲಿ ಸಿನಿಮಾದ ಪ್ರಮೋಷನ್ (Promotion)ಗಾಗಿ ಸೋಮವಾರ ಬಂದಿದ್ದ ಶ್ರೀನಿ, ಸಿನಿಮಾ ಮತ್ತು ಶಿವಮೊಗ್ಗದ ಬಗ್ಗೆ ತಿಳಿಸಿದ್ದಾರೆ.

OLD MONK PROMOTION 1
ಶಿವಮೊಗ್ಗದಲ್ಲಿ ಓಲ್ಡ್ ಮಾಂಕ್ ಪ್ರಮೋಷನ್ ಗೆ ಆಗಮಿಸಿದ ಶ್ರೀನಿ ಮಾತನಾಡಿದರು.

‘ಓಲ್ಡ್ ಮಾಂಕ್’ ಹೆಸರು ಕೇಳುವುದಕ್ಕೇ ಸ್ವಲ್ಪ ವಿಶಿಷ್ಟ ಎನಿಸುತ್ತದೆ. ಬೇರೆಯ ಕಲ್ಪನೆಯೇ ಮೂಡುತ್ತದೆ. ಆದರೆ, ಅಂತಹದ್ದೇನೂ ಇಲ್ಲ. ಇದರ ಕನ್ನಡದ ಪದಶಃ ಆಖ್ಯಾನ ‘ಹಳೇ ಸಂತ’ ಎಂದಾಗುತ್ತದೆ. ಹಳೇ ಸಂತನೆಂದರೆ ‘ನಾರದ’. ಈ ನಾರದನಿಗೆ ದೇವಲೋಕದಲ್ಲಿ ಶಾಪ ಸಿಕ್ಕು ಅಲ್ಲಿಂದ ಭೂಲೋಕಕ್ಕೆ ಬರುತ್ತಾನೆ. ಇಲ್ಲಿ ಹುಡುಗಿಯರ ಮನವೊಲೈಸಲು ಪಡುವ ಪಡಿಪಾಟಲು ಚಿತ್ರದ ತಿರಳಾಗಿದೆ. ಇದು ಪಕ್ಕಾ ಎಂಟರ್ ನೈನ್ಮೆಂಟ್ ಮೂವಿಯಾಗಿದ್ದು, ಕುಟುಂಬದೊಂದಿಗೆ ಕುಳಿತು ಮನೋರಂಜನೆಯನ್ನು ಸವಿಯಬಹುದು.

READ | ಶಿವಮೊಗ್ಗದಲ್ಲಿ ಹಿಜಾಬ್ ಧರಿಸಿಯೇ ಪರೀಕ್ಷೆಗೆ ಬಂದ ವಿದ್ಯಾರ್ಥಿನಿಯರು, ಪ್ರತ್ಯೇಕ ಕೊಠಡಿ ವ್ಯವಸ್ಥೆ, ಅರ್ಧದಷ್ಟು ವಿದ್ಯಾರ್ಥಿಗಳು ಗೈರು, ಕಂಪ್ಲೀಟ್ ರಿಪೋರ್ಟ್

ಇದೇ ತಿಂಗಳು 25ರಂದು ರಾಜ್ಯದ ನೂರು ಚಿತ್ರ ಮಂದಿರಗಳನ್ನು ತೆರೆಕಾಣಲಿದೆ. ಪ್ರತಿಯೊಬ್ಬರೂ ಫಸ್ಟ್ ಶೋ ಅನ್ನೇ ನೋಡಬೇಕು. ನೀಡಿದ ಹಣಕ್ಕಂತೂ ಖಂಡಿತ ಮೋಸ ಆಗುವುದಿಲ್ಲ. ಚಿತ್ರ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಶಿವಮೊಗ್ಗ ಅಂದರೆ ರಂಗಭೂಮಿಯ ನೆಲೆ
ರಾಜ್ಯದ ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಐದು ಕಡೆಗಳಲ್ಲಿ ಆಡಿಷನ್ ಮಾಡಲಾಗಿದೆ. ಅದರಲ್ಲಿ ಅತಿ ಖುಷಿ ನೀಡಿದ್ದು, ಶಿವಮೊಗ್ಗ. ಈ ನೆಲಕ್ಕೆ ಕಲೆಯ ನಂಟು ಇರುವುದರಿಂದಾಗಿಯೇ ಜನರಿಗೆ ಸಹಜವಾಗಿಯೇ ಕಲೆ, ನಟನೆಯ ಕಡೆಗೆ ವಿಶೇಷ ಸೆಳೆತವಿದೆ. ಅಭಿನಯವನ್ನು ಪ್ರೀತಿಯಿಂದ ಮಾಡುತ್ತಾರೆ. ಶಿವಮೊಗ್ಗದ ನಾಲ್ಕೈದು ಜನರು ಚಿತ್ರದಲ್ಲಿದ್ದು, ಅವರಿಗೆ ಮೇನ್ ರೋಲ್ ಗಳನ್ನೇ ನೀಡಲಾಗಿದೆ.
ಮಾಧ್ಯಮಗೋಷ್ಠಿಯಲ್ಲಿ ಬಾಲನಟ ಸಾತ್ವಿಕ್, ಸಹ ಕಲಾವಿದರಾದ ವಿಜಯಲಕ್ಷ್ಮೀ, ಗೌರಿ ಚಂದ್ರಚಕೋರಿ ಮತ್ತಿತರರು ಉಪಸ್ಥಿತರಿದ್ದರು.

https://www.suddikanaja.com/2022/02/03/old-monk-cinema-release-date-fixed-movie-directed-by-mg-srinivas/

error: Content is protected !!