ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೊರೊನಾ ಸೋಂಕು ಬುಧವಾರ ನಾಲ್ವರನ್ನು ಬಲಿ ಪಡೆದಿದೆ. 548 ಮಂದಿಗೆ ಸೋಂಕು ದೃಢಪಟ್ಟಿದ್ದು, 328 ಜನರು ಕಾಯಿಲೆಯಿಂದ ಗುಣಮುಖರಾಗಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ 147 ಮಂದಿಗೆ ಸೋಂಕು ದೃಢಪಟ್ಟಿದೆ. ಭದ್ರಾವತಿಯಲ್ಲಿ 68, ತೀರ್ಥಹಳ್ಳಿಯಲ್ಲಿ 49, ಶಿಕಾರಿಪುರದಲ್ಲಿ 103, ಸಾಗರದಲ್ಲಿ 57, ಹೊಸನಗರದಲ್ಲಿ 37, ಸೊರಬದಲ್ಲಿ 76 ಹಾಗೂ ಬಾಹ್ಯ ಜಿಲ್ಲೆಯ 11 ಜನರಲ್ಲಿ ಸೋಂಕು ಪತ್ತೆಯಾಗಿದೆ.
READ | ಫೆ.4ರಂದು ಶಿವಮೊಗ್ಗ ನಗರದ ಬಹುಭಾಗದಲ್ಲಿ ಕರೆಂಟ್ ಇರಲ್ಲ
ಸಕ್ರಿಯ ಪ್ರಕರಣಗಳಲ್ಲಿ ಏರಿಕೆ
ಸಕ್ರಿಯ ಪ್ರಕರಣಗಳ ಸಂಖ್ಯೆ 2,617ಕ್ಕೆ ಏರಿಕೆಯಾಗಿದೆ. ಕೊರೊನಾ ರೋಗದ ಲಕ್ಷಣಗಳನ್ನು ಹೊಂದಿರುವ 2,393 ಮಂದಿಯ ಮಾದರಿಗಳನ್ನು ಸಂಗ್ರಹಿಸಿದ್ದು, ಹಳೆಯದ್ದೂ ಸೇರಿ 2,786 ರಿಪೆÇೀರ್ಟ್ ನೆಗೆಟಿವ್ ಬಂದಿವೆ. ಕೋವಿಡ್ ಆಸ್ಪತ್ರೆಯಲ್ಲಿ 55 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸಿಎಚ್.ಸಿಯಲ್ಲಿ 20, ಖಾಸಗಿ ಆಸ್ಪತ್ರೆಯಲ್ಲಿ 9, ಟ್ರಯಾಜ್ ನಲ್ಲಿ 20 ಹಾಗೂ ಮನೆ ಆರೈಕೆಯಲ್ಲಿ 2,513 ಸೋಂಕಿತರಿದ್ದಾರೆ.