ಶಿವಮೊಗ್ಗ ಮೇಲೆ ‘ನೇತ್ರಾ ವಿ3’ ಡ್ರೋನ್ ಕಣ್ಣು, ತೀವ್ರ ನಿಗಾಕ್ಕೆ ಒಟ್ಟು 6 ಡ್ರೋನ್, ಏನಿದರ ವಿಶೇಷ?

 

 

ಸುದ್ದಿ ಕಣಜ.ಕಾಂ | CITY | HIGH SECURITY 
ಶಿವಮೊಗ್ಗ: ನಗರದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಮೇಲೆಯೂ ಡ್ರೋನ್ ಕಣ್ಣಿಡಲಿದೆ. ಮಂಗಳವಾರ ರಾತ್ರಿ ನಕ್ಸಲ್ ನಿಯಂತ್ರಣ ಪಡೆ (anti naxal force-ಎ.ಎನ್.ಎಫ್) ಶಿವಮೊಗ್ಗಕ್ಕೆ ಆಗಮಿಸಿದ್ದು, ಬುಧವಾರ ಬೆಳಗ್ಗೆಯಿಂದ ಕಾರ್ಯಾಚರಣೆ ಆರಂಭಿಸಿದೆ.

READ | ಶಿವಮೊಗ್ಗದಲ್ಲಿ ಕರ್ಫ್ಯೂ ವಿಸ್ತರಣೆ, ಯಾವುದಕ್ಕೆಲ್ಲ ನಿರ್ಬಂಧ?

ಎ.ಎನ್.ಎಫ್ ಡ್ರೋನ್ ವಿಶೇಷವೇನು?
ಉಡುಪಿ ಜಿಲ್ಲೆಯ ಕಾರ್ಕಳದಿಂದ ಶಿವಮೊಗ್ಗಕ್ಕೆ ಬಂದಿರುವ ನಕ್ಸಲ್ ನಿಗ್ರಹ ಪಡೆ ಎರಡು ಡ್ರೋನ್ ಗಳನ್ನು ತಂದಿದೆ. ಮೊದಲ ದಿನ ಅಶೋಕ ವೃತ್ತ ವ್ಯಾಪ್ತಿಯ ಪ್ರದೇಶದ ಮೇಲೆ ನಿಗಾ ಇಡಲಾಗಿದೆ. ಬೆಳಗ್ಗೆ ಪ್ರಯೋಗಾರ್ಥವಾಗಿ ತಂಡವು ಡ್ರೋನ್ ಅನ್ನು ಹಾರಿಸಿದೆ.
‘ನೇತ್ರಾ ವಿ-3’ (Netra V 3 Drone) ಹೆಸರಿನ ಡ್ರೋನ್ ಇದಾಗಿದ್ದು, 500 ಮೀಟರ್ ಎತ್ತರ, 5 ಕಿ.ಮೀ.ವರೆಗೆ ಸೆರೆ ಹಿಡಿಯುತ್ತದೆ. ಒಂದು ಬ್ಯಾಟರಿ 1 ಗಂಟೆ ಬರುತ್ತದೆ. ಬ್ಯಾಟರಿ ಡೌನ್ ಆದ್ಮೇಲೆ ಇರುವ ಜಾಗದಲ್ಲೇ ಬರುತ್ತದೆ. ಒಂದು ಡ್ರೋನ್‍ಗೆ 3 ಬ್ಯಾರಿ ಇದೆ. ಒಂದು ಡ್ರೋನ್ ಗೆ ಇಬ್ಬರು ಹ್ಯಾಂಡ್ಲರ್ ಇದ್ದಾರೆ. ಇಂತಹ ಡ್ರೋನ್ ಗಳನ್ನು ದುರ್ಗಮ ಕಾಡಿನಲ್ಲಿ ನಕ್ಸಲರ ಚಟುವಟಿಕೆಗಳ ಮೇಲೆ ಕಣ್ಣಿಡಲು ಬಳಕೆ ಮಾಡಲಾಗುತ್ತದೆ.
ಶಿವಮೊಗ್ಗಕ್ಕೆ ಒಟ್ಟು ಆರು ಡ್ರೋನ್
ನಗರದ ಮೇಲೆ ಕಣ್ಣಿಡಲು ಒಟ್ಟು ಆರು ಡ್ರೊನ್ ಗಳನ್ನು ತರಲಾಗಿದೆ. ಎ.ಎನ್.ಎಫ್ 2, ಸಿ.ಎಸ್.ಪಿ 2, ಮಂಡ್ಯದಿಂದ 1 ಹಾಗೂ ಕಾರವಾರದಿಂದ 1 ಡ್ರೋನ್ ಕಾರ್ಯನಿರ್ವಹಿಸುತ್ತಿವೆ.

https://www.suddikanaja.com/2021/03/22/drone-eye-on-mining/

error: Content is protected !!