ಸುದ್ದಿ ಕಣಜ.ಕಾಂ | KARNATAKA | ENTERTAINMENT NEWS
ಬೆಂಗಳೂರು: ತನ್ನ ಫಸ್ಟ್ ಲುಕ್ ಮೂಲಕವೇ ಅಭಿಮಾನಿಗಳನ್ನು ಫಿದಾ ಆಗುವಂತೆ ಮಾಡಿದ್ದ ಎಂ.ಜಿ.ಶ್ರೀನಿವಾಸ್ ನಿರ್ದೇಶನದ `ಓಲ್ಡ್ ಮಾಂಕ್’ ಸಿನಿಮಾ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಫೆಬ್ರವರಿ 11ರಂದು ಚಿತ್ರ ಬಿಡುಗಡೆ ಆಗುತಿತ್ತು. ಆದರೆ, ಡೇಟ್ ಸ್ವಲ್ಪ ಮುಂದಕ್ಕೆ ಹೋಗಿದ್ದು, ಫೆ.25ರಂದು ಚಿತ್ರ ಬಿಡುಗಡೆ ಆಗಲಿದೆ. ಹೀಗಾಗಿ, ಅಭಿಮಾನಿಗಳು ಕೂಡ ಕಾತರದಿಂದ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.
READ | ಪಕ್ಕಾ ಫ್ಯಾಮಿಲಿ ಎಂಟರ್ ಟೇನ್ಮೆಂಟ್ ಚಿತ್ರ `ಓಲ್ಡ್ ಮಾಂಕ್’, ಫಸ್ಟ್ಲುಕ್ಗೆ ಅಭಿಮಾನಿಗಳು ಫಿದಾ
ಈಗಾಗಲೇ ಚಿತ್ರದ ತೆಲುಗು ಡಬ್ಬಿಂಗ್ ಹಕ್ಕು ಉತ್ತಮ ಬೆಲೆಗೆ ಮಾರಾಟ ಕಂಡಿರುವ `ಓಲ್ಡ್ ಮಾಂಕ್’ ಪಕ್ಕಾ ಫ್ಯಾಮಿಲಿ ಎಂಟರ್ ಟೇನ್ಮೆಂಟ್ ಸಿನಿಮಾ ಆಗಿದ್ದು, ಬಿಡುಗಡೆಗೂ ಮುನ್ನವೇ ಚಿತ್ರ ಭಾರಿ ಹವಾ ಮಾಡಿದೆ.
ಇದೇ ಮೊದಲ ಸಲ ಶ್ರೀನಿ, ಅದಿತಿ ಪ್ರಭುದೇವ್ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ವೃದ್ಧಾಶ್ರಮದ ಕಥೆಯನ್ನೂ ಹೇಳಲಿದ್ದಾರೆ. ಫ್ಯಾಮಿಲಿ ಮನೋರಂಜನೆಯೊಂದಿಗೆ, ರೊಮ್ಯಾಂಟಿಕ್ ಕಾಮಿಡಿ ಸಹ ಸಿನಿಮಾದಲ್ಲಿದೆ.
ಚಿತ್ರದಲ್ಲಿ ಹಿರಿಯ ನಟರಾದ ಸುದೇವ್ ನಾಯರ್, ಎಸ್.ನಾರಾಯಣ್, ಸಿಹಿಕಹಿ ಚಂದ್ರು ಇತರರಿದ್ದಾರೆ. ಟಗರು ಸೇರಿ ಹಲವು ಚಿತ್ರಗಳ ಮೂಲಕ ಭಾರಿ ಹವಾ ಸೃಷ್ಟಿಸಿರುವ ಶ್ರೀನಿವಾಸ್ ಅವರು ಹೊಸ ಕಥೆಯೊಂದಿಗೆ ಅಭಿಮಾನಿಗಳ ಮನಸ್ಸು ಗೆಲ್ಲಲಿದ್ದಾರೆ.
ಮಲೆನಾಡಿನಲ್ಲಿ ನಡೀತಿದೆ ‘ಅದೊಂದಿತ್ತು ಕಾಲ’ ಶೂಟಿಂಗ್, ಅದಿತಿ ಪ್ರಭುದೇವ್, ಅಮೂಲ್ಯ, ವಿನಯ್ ರಾಜ್ ಕುಮಾರ್ ಆಗಮನ