ಸುದ್ದಿ ಕಣಜ.ಕಾಂ | DISTRICT | ENTERTAINMENT NEWS
ಶಿವಮೊಗ್ಗ: ನಗರದ ಭಾರತ್ ಸಿನೆಮಾಸ್ ಹಾಗೂ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಫೆಬ್ರವರಿ 28ರಿಂದ ‘ಓಲ್ಡ್ ಮಾಂಕ್’ (old monk) ಚಿತ್ರ ಪ್ರದರ್ಶನಗೊಳ್ಳಲಿದೆ.
ಎಂ.ಜಿ.ಶ್ರೀನಿವಾಸ್ ನಿರ್ದೇಶನದ ಓಲ್ಡ್ ಮಾಂಕ್ ಸಿನಿಮಾದಲ್ಲಿ ಅದಿತಿ ಪ್ರಭುದೇವ್, ಶ್ರೀನಿ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರ ತನ್ನ ಫಸ್ಟ್ ಲುಕ್ ಮೂಲಕವೇ ಅಭಿಮಾನಿಗಳು ಫಿದಾ ಆಗುವಂತೆ ಮಾಡಿತ್ತು.
READ | ಓಲ್ಡ್ ಮಾಂಕ್ ರಹಸ್ಯ ಬಿಚ್ಚಿಟ್ಟ ಡೈರೆಕ್ಟರ್ ಶ್ರೀನಿ, ಶಿವಮೊಗ್ಗ ಬಗ್ಗೆ ಹೇಳಿದ್ದೇನು?
ಶ್ರೀನಿವಾಸ್ ಅವರು ಶಿವಮೊಗ್ಗಕ್ಕೆ ಆಗಮಿಸಿ ಚಿತ್ರದ ಕುರಿತು ಪ್ರಚಾರ ಮಾಡುವುದಲ್ಲದೇ ಅದರ ಒನ್ ಲೈನ್ ಸ್ಟೋರಿಯನ್ನು ಹಂಚಿಕೊಂಡಿದ್ದರು. ಚಿತ್ರದ ಹೆಸರಿನಲ್ಲೇ ಸಾಕಷ್ಟು ಟ್ವಿಸ್ಟ್ ಇರುವುದನ್ನು ಹಂಚಿಕೊಂಡಿದ್ದರು. ಪ್ರತಿಯೊಬ್ಬರು ಫಸ್ಟ್ ಶೋ ವೀಕ್ಷಿಸುವ ಮೂಲಕ ಬೆಂಬಲಿಸಬೇಕು. ನೀಡಿದ ಹಣಕ್ಕಂತೂ ಖಂಡಿತ ಮೋಸವಿಲ್ಲ ಎಂದು ಹೇಳಿದ್ದರು.