ಸುದ್ದಿ ಕಣಜ.ಕಾಂ | CITY | CURFEW
ಶಿವಮೊಗ್ಗ: ಜಿಲ್ಲಾಡಳಿತ ಶುಕ್ರವಾರ ಮತ್ತೊಂದು ಆದೇಶವನ್ನು ಹೊರಡಿಸಿದ್ದು, ಅದರನ್ವಯ ಕರ್ಫ್ಯೂ ಅನ್ನು ವಿಸ್ತರಣೆ ಮಾಡಲಾಗಿದೆ.
ನಗರದ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಗರ ವ್ಯಾಪ್ತಿಯೊಳಗೆ ಬರುವ ಎಲ್ಲ ಪ್ರದೇಶಗಳಲ್ಲಿ ಸಿ.ಆರ್.ಪಿ.ಸಿ ಕಲಂ 144 ಅನ್ವಯ ಪ್ರತಿಬಂಧಕಾಜ್ಞೆಯು ಫೆಬ್ರವರಿ 28ರ ಬೆಳಗ್ಗೆ 9ರ ವರೆಗೆ ಜಾರಿಯಲ್ಲಿ ಇರಲಿದೆ.
READ | ಕರ್ಫ್ಯೂ ಅವಧಿಯಲ್ಲಿ ಸಡಿಲಿಕೆ, ಶಾಲಾ, ಕಾಲೇಜುಗಳ ರಜೆ ವಿಸ್ತರಣೆ
ನಿಬಂಧನೆಗಳೇನು?
- ಐದು ಮತ್ತು ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿರ್ಬಂಧಿಸಿದೆ.
- ಫೆ.26ರ ಶನಿವಾರ ಮತ್ತು 27ರ ಭಾನುವಾರದಂದು ಬೆಳಗ್ಗೆ 6ರಿಂದ ಸಂಜೆ 4 ಗಂಟೆಯವರೆಗೆ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟಿಗೆ ಅವಕಾಶವಿರುತ್ತದೆ.
- ಕರ್ಫ್ಯೂ ಅವಧಿಯಲ್ಲಿ ಮೆರವಣಿಗೆ, ಸಭೆ, ಸಮಾರಂಭ, ಪ್ರತಿಭಟನೆ, ಜಾಥಾ, ಧರಣಿ ಇತ್ಯಾದಿಗಳನ್ನು ಮಾಡುವಂತಿಲ್ಲ