ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದು, ಜಿಲ್ಲೆಯಲ್ಲಿ ಇಂದು 194 ಮಂದಿಗೆ ಸೋಂಕು ದೃಢಪಟ್ಟಿದೆ. 449 ಮಂದಿ ಸೋಂಕಿನಿಂದ ಸ್ವಸ್ಥರಾಗಿದ್ದು, ಇಬ್ಬರು ನಿಧನರಾಗಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ 53 ಮಂದಿಗೆ ಸೋಂಕು ದೃಢಪಟ್ಟಿದೆ. ಭದ್ರಾವತಿಯಲ್ಲಿ 28, ತೀರ್ಥಹಳ್ಳಿಯಲ್ಲಿ 4, ಶಿಕಾರಿಪುರದಲ್ಲಿ 39, ಸಾಗರದಲ್ಲಿ 24, ಹೊಸನಗರದಲ್ಲಿ 8, ಸೊರಬದಲ್ಲಿ 22 ಹಾಗೂ ಬಾಹ್ಯ ಜಿಲ್ಲೆಯ 16 ಜನರಲ್ಲಿ ಸೋಂಕು ಪತ್ತೆಯಾಗಿದೆ.
READ | ಸಿಂಹಗಳ ನಡುವೆ ಕಾಳಗ, ತ್ಯಾವರೆಕೊಪ್ಪದಲ್ಲಿ ಸಿಂಹಿಣಿ ಸಾವು, ಅದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ
ಸಕ್ರಿಯ ಪ್ರಕರಣಗಳಲ್ಲೂ ತುಸು ಇಳಿಕೆ
ಸಕ್ರಿಯ ಪ್ರಕರಣಗಳ ಸಂಖ್ಯೆ 2,397 ಇದೆ. ಕೊರೊನಾ ರೋಗದ ಲಕ್ಷಣಗಳನ್ನು ಹೊಂದಿರುವ 2,208 ಮಂದಿಯ ಮಾದರಿಗಳನ್ನು ಸಂಗ್ರಹಿಸಿದ್ದು, 1,616 ರಿಪೋರ್ಟ್ ನೆಗೆಟಿವ್ ಬಂದಿವೆ. ಕೋವಿಡ್ ಆಸ್ಪತ್ರೆಯಲ್ಲಿ 58 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸಿಎಚ್ಸಿಯಲ್ಲಿ 21, ಖಾಸಗಿ ಆಸ್ಪತ್ರೆಯಲ್ಲಿ 10, ಟ್ರಿಯೇಜ್ನಲ್ಲಿ 10 ಹಾಗೂ ಮನೆ ಆರೈಕೆಯಲ್ಲಿ 2,298 ಸೋಂಕಿತರಿದ್ದಾರೆ.
https://www.suddikanaja.com/2021/10/30/two-accused-exiled-from-shivamogga/