ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಫೆಬ್ರವರಿ 7ರಂದು ನಗರದ ಬಾಲರಾಜ್ ಅರಸ್ ರಸ್ತೆಯ ಡಿ.ಸಿ.ಸಿ ಬ್ಯಾಂಕ್ ಮುಂಭಾಗದ ರಸ್ತೆ ಪಕ್ಕದ ಫುಟ್ಪಾತ್ ಮೇಲೆ ಸುಮಾರು 30 ರಿಂದ 35 ವರ್ಷದ ಅನಾರೋಗ್ಯಪೀಡಿತ ಅಪರಿಚಿತ ವ್ಯಕ್ತಿ ಮೃತಪಟಿರುತ್ತಾರೆ.
READ | SSLC ಪಾಸ್ ಆದವರಿಗೆ ಶಿಕಾರಿಪುರದಲ್ಲಿ ಉದ್ಯೋಗ, VRW ಹುದ್ದೆಗೆ ಈಗಲೇ ಅರ್ಜಿ ಸಲ್ಲಿಸಿ
ಮೃತ ವ್ಯಕ್ತಿಯು ಸುಮಾರು 5.4 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ ಇದ್ದು, ಕಂದು ಬಣ್ಣದ ತುಂಬು ತೋಳಿನ ಅಂಗಿ, ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಶವ ಇರಿಸಲಾಗಿದೆ. ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಎಸ್.ಪಿ. ಶಿವಮೊಗ್ಗ ದೂ.ಸಂ 08182-261400, ಜಿಲ್ಲಾ ಕಂಟ್ರೋಲ್ ರೂಂ ಸಂ: 08182-261413, ಜಯನಗರ ಪೆÇಲೀಸ್ ಠಾಣೆ ಸಂ: 08182-261416 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.