ಸಾಗರ ಆರ್.ಟಿ.ಓದಲ್ಲಿ ಇನ್ಮುಂದೆ ಆನ್ ಲೈನ್ ಸೌಲಭ್ಯ, ಏನೇನು ಸೇವೆ ಲಭ್ಯ

 

 

ಸುದ್ದಿ ಕಣಜ.ಕಾಂ | TALUK | RTO SERVICE
ಸಾಗರ: ಸಾಗರ ಪ್ರಾದೇಶಿಕ ಸಾರಿಗೆ ಕಚೇರಿ (RTO)ಯಲ್ಲಿ ಇನ್ನು ಮುಂದೆ ಸಾರ್ವಜನಿಕರಿಗೆ ವಿವಿಧ ಸೇವೆಗಳು ಆನ್ಲೈನ್  (online) ಮೂಲಕವೇ ಲಭ್ಯವಾಗಲಿವೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವ ಸೇವೆಗಳು ಲಭ್ಯ?

ಕಲಿಕಾ ಚಾಲನಾ ಅನುಜ್ಞಾ ಪತ್ರ (DL) ಹಾಗೂ ಚಾಲನ ಅನುಜ್ಞಾ ಪತ್ರ ನವೀಕರಣ (Renewal), ಚಾಲನಾ ಅನುಜ್ಞಾಪತ್ರ ನಕಲು (Duplicate), ಚಾಲನಾ ಅನುಜ್ಞಾಪತ್ರ ವಿಳಾಸ ಬದಲಾವಣೆ (Address Change), ಹೆಸರು ಬದಲಾವಣೆ (Name Change) ಇವುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಂಪರ್ಕ ರಹಿತ (Contact less Service) ಸೇವೆಗಳನ್ನು ಜಾರಿಗೆ ತರಲಾಗಿದೆ.
ಕಚೇರಿಯಲ್ಲಿ ಮೇಲ್ಕಂಡ ಯಾವ ಸೇವೆಗೂ ನಗದು ಶುಲ್ಕ ಹಾಗೂ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ, ಆದ್ದರಿಂದ ಕಚೇರಿಗೆ ಹಾಜರಾಗುವ ಅವಶ್ಯಕತೆ ಇರುವುದಿಲ್ಲ. ಈ ಸೇವೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿರುತ್ತಾರೆ.

https://www.suddikanaja.com/2021/11/05/a-man-arrested-by-kabban-park-police/

error: Content is protected !!