ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಫೆ.12 ರಂದು ರಾತ್ರಿ ಹಿಟ್ಟೂರು-ಮಲ್ಲಾಪುರ ಮಾರ್ಗದಲ್ಲಿ ನಡೆದು ಹೊಗುತ್ತಿದ್ದ ಸುಮಾರು 55 ರಿಂದ 60 ವರ್ಷ ಅನಾಮಧೇಯ ಪುರುಷನಿಗೆ ಯಾವುದೋ ವಾಹನ ಡಿಕ್ಕಿ ಹೊಡೆದು ಹೋಗಿದ್ದು ಆತನ ತಲೆ, ಮೈ,ಕೈಗೆ ತೀವ್ರವಾದ ಪೆಟ್ಟು ಬಿದ್ದು ಮೃತ ಪಟ್ಟಿರುತ್ತಾನೆ. ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.
ಮೃತ ವ್ಯಕ್ತಿಯು 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈ ಬಣ್ಣ, ತಲೆಯಲ್ಲಿ ಬಿಳಿ ಕೂದಲು ಹೊಂದಿದ್ದು, ನೀಲಿ ಹಳದಿ ಬಣ್ಣದ ಚೌಕಳಿ ಶರ್ಟ್, ಕಂದು ಬಣ್ಣದ ಬನಿಯನ್, ಬಿಳಿ ಬಣ್ಣದ ಪಂಚೆ ಧರಿಸಿರುತ್ತಾರೆ. ಈ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಕುಂಸಿ ಪೊಲೀಸ್ ಠಾಣೆಗಾಗಲಿ (08182 262332, 9480803351) ಅಥವಾ ಶಿವಮೊಗ್ಗ ಜಿಲ್ಲಾ ಪೊಲೀಸ್ ನಿಯಂತ್ರಣ ಕೋಣೆ, ದೂರವಾಣಿ ಸಂಖ್ಯೆ 08182 261412, 08182 261413 ತಿಳಿಸಬಹುದೆಂದು ಪ್ರಕಟಣೆ ತಿಳಿಸಿದೆ.