ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾರ್ಚ್ 3ರಂದು ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ನಗರ ಉಪ ವಿಭಾಗ 3ರ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
READ | ವಿನೋಬನಗರದಲ್ಲಿ ಒಂದೇ ದಿನ ಎರಡು ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ
ಇಲಿಯಾಸ್ ನಗರ 1 ರಿಂದ 13ನೇ ಕ್ರಾಸ್ಗಳು, ಫಾರೂಕ್ಯ ಶಾದಿಮಹಲ್, ಇಲಿಯಾಜ್ ನಗರ ಲಾರಿ ಗ್ಯಾರೇಜ್, ಕೆಳಗಿನ ತುಂಗಾನಗರ ಮಂಡಕ್ಕಿ ಭಟ್ಟಿ, ಟಿಪ್ಪುನಗರ, ಮಂಜುಣಾಥ ಬಡಾವಣೆ, ದುರ್ಗಿಗುಡಿ ಮಾರ್ಗ, ಖಾಜಿನಗರ 80 ಅಡಿ ರಸ್ತೆ, ಕಾಮತ್ ಲೇಔಟ್, ಮಲ್ಲಿಕಾರ್ಜುನ ಬಡಾವಣೆ, ಮಂಜುನಾಥ ಬಡಾವಣೆ, ಮಿಳಘಟ್ಟ, ಆನಂದರಾವ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ, ಐಹೊಳೆ, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್, ಹನುಮಂತಾಪುರ, ಶರಾವತಿನಗರ, ಶಾರದ ಕಾಲೋನಿ ಸುತ್ತಮುತ್ತಲಿನ ಐಪಿ ಲಿಮಿಟ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.