ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಸರ್ಕಾರಿ ವಕೀಲರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಭರ್ತಿಮಾಡಲು ಅರ್ಹ ನ್ಯಾಯವಾದಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
READ | ಹೊಳೆಹೊನ್ನೂರು ಪೊಲೀಸರ ಭರ್ಜರಿ ದಾಳಿ, ಕಾರ್ ಕ್ಯಾಬಿನ್ ನಲ್ಲಿದ್ದ 18 ಲಕ್ಷ ರೂ. ಕದ್ದಿದ್ದ ಆರೋಪಿಗಳು ಅರೆಸ್ಟ್
ಈ ಹುದ್ದೆಗೆ 3 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ಅನುಭವ ಹೊಂದಿರುವ ನ್ಯಾಯವಾದಿಗಳು ತಮ್ಮ ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಿದ್ಧಪಡಿಸಿ ಮಾರ್ಚ್ 7 ರೊಳಗಾಗಿ ಜಿಲ್ಲಾಧಿಕಾರಿಗಳ ನ್ಯಾಯಾಂಗ ಶಾಖೆಯಲ್ಲಿ ಅರ್ಜಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ದೂರವಾಣಿ ಸಂಖ್ಯೆ 08182-221100/221010 ಅಥವಾ ನ್ಯಾಯಾಂಗ ಶಾಖೆಯನ್ನು ಖುದ್ದಾಗಿ ಸಂಪರ್ಕಿಸುವುದು.