ಮಹಿಳೆಯರಿಗೆ ಭಿನ್ನವಾಗಿ ಗೌರವ ಸೂಚಿಸಿದ ಗೂಗಲ್, ವೈರಲ್ ಆಯ್ತು ಎನಿಮೇಷನ್, ಏನಿದರ ವಿಶೇಷ?

ಸುದ್ದಿ ಕಣಜ.ಕಾಂ | NATIONAL | WOMEN’S DAY
ಬೆಂಗಳೂರು: ಸರ್ಚ್ ಎಂಜಿನ್ ದೈತ್ಯ ಸಂಸ್ಥೆ ಗೂಗಲ್ (google) ಮಹಿಳಾ ದಿನಾಚರಣೆಗೆ (women’s day 2022) ಭಿನ್ನವಾಗಿ ಶುಭಾಷಯ ಕೋರಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ತನ್ನ ಛಾಪು ತೋರುತ್ತಿದ್ದಾಳೆ. ಶಿಕ್ಷಣ ಪಡೆಯುವುದಕ್ಕೂ ಕಷ್ಟ ಪಡುತ್ತಿದ್ದ ಹೆಣ್ಣು ಈಗ ಪುರುಷರಿಗೆ ಸರಿಸಮಾನವಾಗಿ ಕಾರ್ಯನಿರ್ವಹಿಸಿದ್ದಾಳೆ. ಸಮಾಜದಲ್ಲಿ ವೈವಿಧ್ಯಮಯ ಪಾತ್ರಗಳನ್ನು ಕಟ್ಟಿಕೊಡುವ ಎನಿಮೇಷನ್ ಮೂಲಕ ಗೂಗಲ್ ಜನಮೆಚ್ಚುಗೆ ಪಡೆದಿದೆ. ಇದು ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೇಸ್ಬುಕ್, ಟ್ವಿಟರ್ ಸೇರಿದಂತೆ ಹಲವೆಡೆ ಇದರದ್ದೇ ಮಾತು. ಸಾಮಾನ್ಯವಾಗಿ ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯ ಚಿತ್ರವನ್ನು ಡೂಡಲ್ ನಲ್ಲಿ ಹಾಕದೇ ಮಹಿಳೆಯು ಸಮಾಜದಲ್ಲಿ ಹೊಂದಿರುವ ಪಾತ್ರಗಳನ್ನು ಗೌರವಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.

READ | ಹೊಳಲೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ, ಏನೇನು ಪರಿಶೀಲನೆ

ಡೂಡಲ್ ಎನಿಮೇಷನ್ (Doodle animation)ನಲ್ಲಿ ಏನಿದೆ

  1. ಮೊದಲನೇ ಸ್ಲೈಡ್: ವರ್ಕ್ ಫ್ರಮ್ ಹೋಮ್ ನಲ್ಲಿರುವ ಗೃಹಿಣಿಯೊಬ್ಬಳು ಎದುರುಗಡೆ ಲ್ಯಾಪ್ ಟಾಪ್ ಇಟ್ಟುಕೊಂಡು ಅದರಲ್ಲಿ ಕೆಲಸ ಮಾಡುತ್ತ ಮಗುವನ್ನು ಗಮನಿಸುತ್ತಿದ್ದಾರೆ. ಪತಿ ಕೂಡ ಮಲಗಿಕೊಂಡು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.
  2. ಎರಡನೇ ಸ್ಲೈಡ್: ಆಪ್ ರೇಷನ್ ಥೇಟರ್ ನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಮಹಿಳೆಯೊಬ್ಬರು ಯಂತ್ರವನ್ನು ಗಮನಿಸುತ್ತಿದ್ದಾರೆ. ಮತ್ತೊಬ್ಬ ಮಹಿಳೆ ವೈದ್ಯರಿಗೆ ಸಹಾಯ ಮಾಡುತ್ತಿದ್ದಾರೆ.
  3. ಮೂರನೇ ಸ್ಲೈಡ್: ಇಬ್ಬರು ಮಕ್ಕಳು ಜೋಕಾಲಿಯಾಡುತ್ತಿದ್ದು, ಮಹಿಳೆಯೊಬ್ಬರು ಗಿಡಗಳಿಗೆ ನೀರುಣಿಸುತ್ತ ಮಕ್ಕಳಿಗೆ ಶುಭ ಕೋರುತ್ತಿದ್ದಾರೆ.
  4. ನಾಲ್ಕನೇ ಸ್ಲೈಡ್: ಯುವತಿಯೊಬ್ಬಳು ಕ್ರಾಫ್ಟಿಂಗ್ ಮಾಡುತ್ತಿದ್ದು, ಯಂತ್ರದ ಸಹಾಯದಿಂದ ಅದಕ್ಕೆ ಮೌಲ್ಡ್ ಮಾಡುತ್ತಿದ್ದಾಳೆ.
  5. ಐದನೇ ಸ್ಲೈಡ್: ಮಹಿಳೆಯೊಬ್ಬರು ಫ್ಯಾಶನ್ ಡಿಸೈನ್ ಮಾಡುತ್ತಿದ್ದು, ವಸ್ತ್ರ ವಿನ್ಯಾಸ ಮಾಡುತ್ತಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಹಾಗೂ ಒಬ್ಬ ವಿದ್ಯಾರ್ಥಿ ವಿನ್ಯಾಸದಲ್ಲಿ ತೊಡಗಿದ್ದಾರೆ.
  6. ಆರನೇ ಸ್ಲೈಡ್: ಗ್ಯಾರೇಜ್ ನಲ್ಲಿ ಮಹಿಳೆಯೊಬ್ಬರು ಬೈಕ್ ಅನ್ನು ರಿಪೇರಿ ಮಾಡುತ್ತಿದ್ದಾರೆ. ಆಕೆಯ ಮಕ್ಕಳು ಹೆಣ್ಣು ಮಗಳಿದ್ದು, ಸಹಾಯ ಮಾಡುತ್ತಿದ್ದಾಳೆ.
  7. ಏಳನೇ ಸ್ಲೈಡ್: ಮಹಿಳೆಯೊಬ್ಬರು ವೈಲ್ಡ್ ಫೋಟೋಗ್ರಾಫಿಯಲ್ಲಿ ತೊಡಗಿದ್ದಾರೆ. ಎದುರುಗಡೆ ಟ್ರೈಪಾಡ್ ನಲ್ಲಿರುವ ಕ್ಯಾಮೆರಾದಲ್ಲಿ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದಾರೆ.

https://www.suddikanaja.com/2021/09/17/viral-infection-in-children-increase-in-karnataka/