ಹೊಳಲೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ, ಏನೇನು ಪರಿಶೀಲನೆ

ಸುದ್ದಿ ಕಣಜ.ಕಾಂ | DISTRICT | PM NARENDRA MODI VISIT
ಶಿವಮೊಗ್ಗ: ಹೊಳಲೂರಿಗೆ ಏಪ್ರಿಲ್ 24ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ. ಈ ಕಾರಣಕ್ಕೆ ಕೇಂದ್ರದ ಉನ್ನತ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

READ | ಹರ್ಷ ಕೊಲೆ ಪ್ರಕರಣ ತನಿಖೆ ಇನ್ನಷ್ಟು ಟೈಟ್, ‘ಯುಎಪಿಎ’ ಕಾಯ್ದೆ ಎಂಟ್ರಿ, ಏನಿದು ಕಾಯ್ದೆ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಕೇಂದ್ರ ಪಂಚಾಯತ್ ರಾಜ್ ಮಂತ್ರಾಲಯದ ಅಪರ ಕಾರ್ಯದರ್ಶಿ ಡಾ. ಚಂದ್ರಶೇಖರ್ ಕುಮಾರ್, ಬೆಂಗಳೂರಿನ ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತರಾದ
ಶಿಲ್ಪಾ ಶರ್ಮಾ ಅವರು ಭೇಟಿ ನೀಡಿ ಅಧಿಕಾರಿಗಳಿಂದ ಸಿದ್ಧತೆಗಳ ಬಗ್ಗೆ ಮಾಹಿತಿಗಳನ್ನು ಪಡೆದರು.
ರಾಜ್ಯ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಪಂ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಎಲ್ಲೆಲ್ಲಿ ಭೇಟಿ, ಏನೇನು ಪರಿಶೀಲನೆ?
ಹೊಳಲೂರು ಗ್ರಾಮದ ಸ್ಪಚ್ಚ ಸಂಕೀರ್ಣ ಘಟಕ, ಸರ್ಕಾರಿ ಶಾಲೆ ಹಾಗೂ ಅಂಗನವಾಡಿ, ಗ್ರಾಮ ಪಂಚಾಯಿತಿ , ಸ್ಪ ಸಹಾಯ ಸಂಘಗಳ ವಾಣಿಜ್ಯ ಮಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

READ | ಸಹ್ಯಾದ್ರಿ ಕಾಲೇಜು ವಾಟ್ಸಾಪ್ ಗ್ರೂಪ್‍ನಲ್ಲಿ ಪಾಕ್ ಧ್ವಜದ ಸ್ಟೀಕರ್ ಪೋಸ್ಟ್, ಕ್ರಮಕ್ಕೆ ಎಬಿವಿಪಿ ಆಗ್ರಹ

ಪ್ರಧಾನಿ ಮೋದಿ ಭೇಟಿಗೆ ಕಾರಣ
ಏಪ್ರಿಲ್ 24ರಂದು ಪ್ರಧಾನಿ ಮೋದಿ ಅವರು ಹೊಳಲೂರು ಗ್ರಾಮ ಪಂಚಾಯಿತಿಯಲ್ಲಿ ಪಂಚಾಯತ್ ರಾಜ್ ದಿನಾಚರಣೆ ಕಾರ್ಯಕ್ರಮಕ್ಕೆ ಭೇಟಿ ನೀಡಲಿದ್ದಾರೆ. ಭೇಟಿ ಹಿನ್ನೆಲೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ.

ಅಮೃತವಾಹಿನಿ ಇಂದು ತೆರೆಗೆ, ಲೀಡ್ ರೋಲ್‍ನಲ್ಲಿ ಎಚ್‍ಎಸ್‍ವಿ, ಕಲ್ಕತ್ತಾದಲ್ಲಿ ಸೈ ಎನಿಸಿಕೊಂಡ ಸಿನಿಮಾ ಇದು