ಚಿನ್ನದ ಬೆಲೆ ದಿಢೀರ್ ಏರಿಕೆಗೆ ಟಾಪ್ 4 ಕಾರಣ, ಬಡವರ ಜೀವ ಹಿಂಡುತ್ತಿರುವ ಬಂಗಾರ

ಸುದ್ದಿ ಕಣಜ.ಕಾಂ | NATIONAL | MARKET TREND
ಬೆಂಗಳೂರು: ಬಂಗಾರ ದುಬಾರಿಯಾಗಿದ್ದು, ಗ್ರಾಹಕರ ಜೇಬು ಸುಡುತ್ತಿದೆ. ಚಿಕ್ಕ ಬಜೆಟ್ ನೊಂದಿಗೆ ಮದುವೆ ಸಮಾರಂಭಕ್ಕೆ ಪೂರ್ವ ತಯಾರಿ ನಡೆಸುತ್ತಿರುವ ಕುಟುಂಬಗಳಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಇತ್ತ ಮದುವೆಗಾಗಿ ಮಾಡಿಕೊಂಡಿರುವ ಕಮಿಟ್ಮೆಂಟ್ ಗಳಿಂದಾಗಿ ಚಿನ್ನ ಖರೀದಿ ಮಾಡಲೇಬೇಕು.

READ | ಚಿನ್ನಾಭರಣ ಪ್ರಿಯರಿಗೆ ಶಾಕ್, ಬಂಗಾರದ ಬೆಲೆಯಲ್ಲಿ ದಾಖಲೆಯ ಏರಿಕೆ, 9 ದಿನಗಳ ರೇಟ್ ಇಲ್ಲಿದೆ

ಭಾರತದಲ್ಲಿ ಚಿನ್ನ ಅಲಂಕಾರಿಕ ಆಭರಣವಷ್ಟೇ ಅಲ್ಲ, ಇದು ಹೂಡಿಕೆಯ ಸಾಧನ. ಹೀಗಾಗಿಯೇ, ಚಿನ್ನವನ್ನು ಮೌಲ್ಯದ ಮಳಿಗೆ ಎಂದೇ ಕರೆಯಲಾಗುತ್ತದೆ. ಚಿನ್ನದ ಮೌಲ್ಯವು ಸರ್ಕಾರದ ಬಡ್ಡಿದರದಿಂದ ಪ್ರಭಾವಿತವಾಗುವುದಿಲ್ಲ. ಜೊತೆಗೆ, ಚಿನ್ನ ಭಾರತೀಯರ ಪಾಲಿಗೆ ಕಷ್ಟದ ಕಾಲದಲ್ಲಿ ಬಳಕೆಯಾಗುವ ತುರ್ತು ವಿಮೆಯಿದ್ದಂತೆಯೇ ಯಾವುದೇ ಆರ್ಥಿಕ ಸಂಕಷ್ಟ ಎದುರಾದರೂ ತಕ್ಷಣ ಅದನ್ನು ಅಡಮಾನವಿಟ್ಟು ಹಣ ಪಡೆಯುವ ಭರವಸೆ ಇದೆ. ಅಪಮೌಲ್ಯವಾಗುವುದು ವಿರಳ. ಈ ಕಾರಣಗಳಿಂದಾಗಿ ಚಿನ್ನದ ಮೇಲೆ ಹೂಡಿಕೆ ಸೇಫ್ ಎನ್ನುವುದು ಭಾರತೀಯರ ಮನಸ್ಥಿತಿ.
ಹಳದಿ ಲೋಹದ ಬೆಲೆಯಲ್ಲಿ ಏರಿಕೆಗೆ ಕಾರಣಗಳಿವು
ಕಾರಣ 1 | ಫೆಬ್ರವರಿವರೆಗೆ ಸ್ಥಿರವಾಗಿದ್ದ ಚಿನ್ನದ ಬೆಲೆಯು ದಿಢೀರ್ ಏರಿಕೆ ಕಂಡಿದೆ. ಅರ್ಥಶಾಸ್ತ್ರಜ್ಞರ ಪ್ರಕಾರ ಇದಕ್ಕೆ ಕಾರಣ, `ರಷ್ಯಾ ಮತ್ತು ಉಕ್ರೇನ್’ ನಡುವಿನ ಯುದ್ಧ.
ಕಾರಣ 2 | ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧದಿಂದ ಆಮದು ಕಡಿಮೆಯ ಭೀತಿಯೂ ಎದುರಾಗಿದೆ. ಹಾಗಾಗಿ, ಹಳದಿ ಲೋಹದ ಬೆಲೆಯಲ್ಲಿ ಏರಿಕೆಯಾಗಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಕಾರಣ 3 | ಇದು ಮದುವೆ ಸೀಸನ್ ಆಗಿದ್ದು, ಸಹಜವಾಗಿಯೇ ಚಿನ್ನದ ಖರೀದಿಯಲ್ಲಿ ಏರಿಕೆಯಾಗುತ್ತದೆ. ಚಿನ್ನದ ಬೆಲೆ ಏರಿಕೆ ಮತ್ತು ಖರೀದಿಯ ನಡುವೆ ನೇರ ಸಂಬಂಧವಿದ್ದು, ಬೇಡಿಕೆ ಹೆಚ್ಚಾದಂತೆ ದರವೂ ಹೆಚ್ಚುತ್ತದೆ.

READ | ಮಹಿಳೆಯರಿಗೆ ಭಿನ್ನವಾಗಿ ಗೌರವ ಸೂಚಿಸಿದ ಗೂಗಲ್, ವೈರಲ್ ಆಯ್ತು ಎನಿಮೇಷನ್, ಏನಿದರ ವಿಶೇಷ?

ಕಾರಣ 4 | ಕರೆನ್ಸಿಗಳಿಗೆ ಸಂಬಂಧಿಸಿದಂತೆ ಡಾಲರ್ ಮೌಲ್ಯವು ಏರಿಕೆಯಾದಾಗ ಚಿನ್ನದ ಬೆಲೆ ಯುಎಸ್ ಡಾಲರ್ ಮೌಲ್ಯದಲ್ಲಿ ಇಳಿಕೆಯಾಗುತ್ತದೆ. ಯುಎಸ್ ಡಾಲರ್ ಮೌಲ್ಯವು ಕಡಿಮೆಯಾದಂತೆ ಚಿನ್ನ ದುಬಾರಿಯಾಗುತ್ತದೆ. ಪ್ರಸ್ತುತ ಭಾರತೀಯ ಕರೆನ್ಸಿ ದರ ಒಂದು ಡಾಲರ್ ಗೆ 76.86 ರೂಪಾಯಿ ಇದೆ.

https://www.suddikanaja.com/2021/07/14/accused-arrest/