ಸುದ್ದಿ ಕಣಜ.ಕಾಂ | CITY | SAHYADRI COLLEGE
ಶಿವಮೊಗ್ಗ: ಸಹ್ಯಾದ್ರಿ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿನಿಯರು ಆಹಾರ ಸೇವಿಸಿ ಅಸ್ವಸ್ಥರಾದ ಬೆನ್ನಲ್ಲೇ ಕಾಲೇಜಿನ ವಿದ್ಯಾರ್ಥಿನಿಯರು ಸೋಮವಾರ ಬೃಹತ್ ಪ್ರತಿಭಟನೆ ಮೂಲಕ ಹಾಸ್ಟೆಲ್ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
READ | ಶಿವಮೊಗ್ಗ ಜಿಲ್ಲೆಯ ಕೈಗಾರಿಕೆಗಳ ಬಗ್ಗೆ ಪ್ರಮುಖ ಮೀಟಿಂಗ್, ಶಿಕಾರಿಪುರದಲ್ಲಿ 2 ಉದ್ದಿಮೆ ಆರಂಭಕ್ಕೆ ಅನುಮೋದನೆ
ಹಾಸ್ಟೆಲ್ ನಲ್ಲಿ ಕುಡಿಯಲು ಸ್ವಚ್ಚ ನೀರು ದೊರಕುತಿಲ್ಲ. ಅಡುಗೆ ಕೋಣೆ ಕೂಡ ಸ್ವಚ್ಚವಾಗಿಲ್ಲ. ಶೌಚಾಲಯವನ್ನು ನಿಯಮಿತವಾಗಿ ಸ್ವಚ್ಚಗೊಳಿಸುವುದಿಲ್ಲ. ಹೀಗೆ ನಾನಾ ಸಮಸ್ಯೆಗಳು ಹಾಸ್ಟೆಲ್ ನಲ್ಲಿವೆ. ಕೂಡಲೇ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಒಂದೇ ರೂಮಿನಲ್ಲಿ 11 ವಿದ್ಯಾರ್ಥಿನಿಯರು
ಹಾಸ್ಟೆಲ್ ನ ಒಂದೇ ರೂಮಿನಲ್ಲಿ 11 ವಿದ್ಯಾರ್ಥಿನಿಯರು ವಾಸಿಸಬೇಕಾಗಿದೆ. ಇದರಿಂದ ಇಕಟ್ಟಾಗಿದ್ದು, ಪರೀಕ್ಷೆ ಸಂದರ್ಭದಲ್ಲಿ ಓದುವುದಕ್ಕೆ ಕಷ್ಟವಾಗುತ್ತಿದೆ. ಇದರೆಡೆ ಗಮನಹರಿಸಬೇಕು. ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
READ | ಸಹ್ಯಾದ್ರಿ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಹೊಟ್ಟೆನೋವು, ವಾಂತಿ, ಆಸ್ಪತ್ರೆಗೆ ದಾಖಲು
ಇತ್ತೀಚೆಗೆ ವಿದ್ಯಾರ್ಥಿನಿಯರು ಹೊಟ್ಟೆ ನೋವು ಮತ್ತು ವಾಂತಿ ಸಮಸ್ಯೆಯಾಗುವುದಕ್ಕೂ ಕಾರಣ ಇಲ್ಲಿಯ ಕಲುಷಿತ ವಾತಾವರಣವೇ ಆಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಪ್ರಗತಿ, ನಿಚಿತಾ, ವಿದ್ಯಾ, ಜ್ಯೋತಿ, ರಮ್ಯ, ಆಶಾ, ಕವಿತಾ, ಮೇಘನ, ಭೂಮಿಕಾ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.