ಸುದ್ದಿ ಕಣಜ.ಕಾಂ |KARNATAKA | MARKET TREND
ಬೆಂಗಳೂರು: ಆಭರಣ ಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿ ಬೆಲೆ ಶಾಕ್ ನೀಡಿದೆ. ಸತತ ಮೂರು ದಿನಗಳು ಇಳಿಕೆಯಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಮತ್ತೆ ಏರಿಕೆಯಾಗಿದೆ. ಇದರಿಂದ ಶುಭ ಕಾರ್ಯಗಳಿಗೆ ಚಿನ್ನಾಭರಣ ಖರೀದಿಸಲು ಮುಂದಾದವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
10 ಗ್ರಾಂ ಚಿನ್ನದ ಬೆಲೆಯು ಗುರುವಾರ 22 ಕ್ಯಾರೆಟ್ ಗೆ 47,450 ರೂ. 24 ಕ್ಯಾರೆಟ್ ಗೆ 51,760 ರೂ. ಇತ್ತು. ಶುಕ್ರವಾರ 24 ಕ್ಯಾರೆಟ್ ಚಿನ್ನಕ್ಕೆ 10 ರೂಪಾಯಿ ಏರಿಕೆಯಾಗಿದ್ದು, 51,770 ರೂ. ನಿಗದಿಯಾಗಿದೆ.
READ | ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ
ರಷ್ಯಾ ಉಕ್ರೇನ್ ಯುದ್ಧ ಆರಂಭವಾಗಿದ್ದೇ ಚಿನ್ನದ ಬೆಲೆಯು ಮಾರ್ಚ್ ಮೊದಲನೇ ವಾರದಿಂದ ಮಾ.13ರ ವರೆಗೆ ಏರಿಕೆಯಾಗಿತ್ತು. ಆದರೆ, ಮಾ.14ರಿಂದ 16ರ ವರೆಗೆ ಮತ್ತೆ ಇಳಿಕೆಯಾಗಿತ್ತು. ಈಗ ಏರುಗತಿಯಲ್ಲಿ ಸಾಗಿದೆ. ಬೆಳ್ಳಿಯ ಬೆಲೆಯು ಗುರುವಾರ ಪ್ರತಿ ಕೆಜಿಗೆ 600 ರೂ. ಹೆಚ್ಚಾಗಿದ್ದು, ಇಂದು ಸ್ಥಿರವಾಗಿದೆ. ಚಿನ್ನ ಬೆಳ್ಳಿಯ ದರ ಕೆಳಗಿನಂತಿದೆ.
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ(ಕೆಜಿ) |
ಮಾರ್ಚ್ 4 | 47,700 | 52,040 | 72,500 |
ಮಾರ್ಚ್ 5 | 48,400 | 52,800 | 73,400 |
ಮಾರ್ಚ್ 6 | 48,400 | 52,800 | 73,400 |
ಮಾರ್ಚ್ 7 | 49,400 | 53,890 | 75,700 |
ಮಾರ್ಚ್ 8 | 49,400 | 53,890 | 74,600 |
ಮಾರ್ಚ್ 9 | 50,700 | 55,310 | 75,700 |
ಮಾರ್ಚ್ 10 | 48,200 | 52,580 | 74,100 |
ಮಾರ್ಚ್ 11 | 48,200 | 52,580 | 74,600 |
ಮಾರ್ಚ್ 12 | 48,400 | 52,800 | 74,700 |
ಮಾರ್ಚ್ 13 | 48,410 | 52,810 | 74,700 |
ಮಾರ್ಚ್ 14 | 48,100 | 52,470 | 74,700 |
ಮಾರ್ಚ್ 15 | 47,600 | 51,930 | 72,800 |
ಮಾರ್ಚ್ 16 | 47,300 | 51,600 | 72,300 |
ಮಾರ್ಚ್ 17 | 47,450 | 51,760 | 72,900 |
ಮಾರ್ಚ್ 18 | 47,450 | 51,770 | 72,900 |