ಸುದ್ದಿ ಕಣಜ.ಕಾಂ |KARNATAKA | MARKET TREND
ಬೆಂಗಳೂರು: ಕಳೆದ ಎರಡು ದಿನಗಳಲ್ಲಿ ಏರಿಕೆ ಕಂಡಷ್ಟು ಚಿನ್ನ ಮತ್ತು ಬೆಳ್ಳಿಯ ಬೆಲೆಯು ಶನಿವಾರವೊಂದೇ ದಿನ ಇಳಿಕೆಯಾಗಿದೆ. ಗುರುವಾರ ಮತ್ತು ಶುಕ್ರವಾರದಂದು ಬಂಗಾರವು ಕ್ರಮವಾಗಿ ಪ್ರತಿ ಗ್ರಾಂಗೆ 160 ರೂಪಾಯಿ, 10 ರೂ. ಇಳಿಕೆಯಾಗಿತ್ತು. ಶನಿವಾರ ಒಂದೇ ದಿನ 24 ಕ್ಯಾರೆಟ್ ಗೆ 170 ರೂ. ಕುಸಿತ ಕಂಡಿದೆ. ಬೆಳ್ಳಿ ಕೂಡ 600 ರೂ. ಇಳಿಮುಖವಾಗಿದೆ.
ಈ ಮೂಲಕ ಚಿನ್ನ ಮತ್ತು ಬೆಳ್ಳಿಯ ಆಭರಣ ಖರೀದಿಸುವವರಿಗೆ ಹೋಳಿ ಕೊಡುಗೆ ಸಿಗಲಿದೆ. ಸತತ ಮೂರು ದಿನಗಳು ಇಳಿಕೆಯಾಗಿದ್ದ ಚಿನ್ನ, ಬೆಳ್ಳಿಯ ಬೆಲೆಯು ಏಕಾಏಕಿ ಏರಿಕೆಯಾಗಿತ್ತು.
READ | ಆಭರಣ ಪ್ರಿಯರಿಗೆ ಮತ್ತೆ ಶಾಕ್, ಚಿನ್ನ, ಬೆಳ್ಳಿ ತುಟ್ಟಿ
10 ಗ್ರಾಂ ಚಿನ್ನದ ಬೆಲೆಯು ಗುರುವಾರ 22 ಕ್ಯಾರೆಟ್ ಗೆ 47,450 ರೂ. 24 ಕ್ಯಾರೆಟ್ ಗೆ 51,760 ರೂ. ಇತ್ತು. ಶುಕ್ರವಾರ 24 ಕ್ಯಾರೆಟ್ ಚಿನ್ನಕ್ಕೆ 10 ರೂಪಾಯಿ ಏರಿಕೆಯಾಗಿದ್ದು, 51,770 ರೂ. ನಿಗದಿಯಾಗಿದೆ.
ರಷ್ಯಾ ಉಕ್ರೇನ್ ಯುದ್ಧ ಆರಂಭವಾಗಿದ್ದೇ ಚಿನ್ನದ ಬೆಲೆಯು ಮಾರ್ಚ್ ಮೊದಲನೇ ವಾರದಿಂದ ಮಾ.13ರ ವರೆಗೆ ಏರಿಕೆಯಾಗಿತ್ತು. ಆದರೆ, ಮಾ.14ರಿಂದ 16ರ ವರೆಗೆ ಮತ್ತೆ ಇಳಿಕೆಯಾಗಿತ್ತು. ಬಳಿಕ ಏರುಗತಿಯಲ್ಲಿ ಸಾಗಿದ್ದ ದರವು ಇಳಿಕೆಯಾಗಿದೆ. ಹಳದಿ ಲೋಹದ ಬೆಲೆಯಲ್ಲಿ ಏರಿಳಿತವಾಗುತ್ತಲೇ ಇದೆ.
ಇಂದಿನ ಚಿನ್ನ, ಬೆಳ್ಳಿಯ ಬೆಲೆ | |||
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ(ಕೆಜಿ) |
ಮಾರ್ಚ್ 4 | 47,700 | 52,040 | 72,500 |
ಮಾರ್ಚ್ 5 | 48,400 | 52,800 | 73,400 |
ಮಾರ್ಚ್ 6 | 48,400 | 52,800 | 73,400 |
ಮಾರ್ಚ್ 7 | 49,400 | 53,890 | 75,700 |
ಮಾರ್ಚ್ 8 | 49,400 | 53,890 | 74,600 |
ಮಾರ್ಚ್ 9 | 50,700 | 55,310 | 75,700 |
ಮಾರ್ಚ್ 10 | 48,200 | 52,580 | 74,100 |
ಮಾರ್ಚ್ 11 | 48,200 | 52,580 | 74,600 |
ಮಾರ್ಚ್ 12 | 48,400 | 52,800 | 74,700 |
ಮಾರ್ಚ್ 13 | 48,410 | 52,810 | 74,700 |
ಮಾರ್ಚ್ 14 | 48,100 | 52,470 | 74,700 |
ಮಾರ್ಚ್ 15 | 47,600 | 51,930 | 72,800 |
ಮಾರ್ಚ್ 16 | 47,300 | 51,600 | 72,300 |
ಮಾರ್ಚ್ 17 | 47,450 | 51,760 | 72,900 |
ಮಾರ್ಚ್ 18 | 47,450 | 51,770 | 72,900 |
ಮಾರ್ಚ್ 19 | 47,300 | 51,600 | 72,300 |