ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಮಲ್ಲೇಶ್ವರನಗರದ ಶ್ರೀ ಮಾಸ್ತಾಂಬಿಕ ದೇವಿ ದೇವಸ್ಥಾನದ ಹಿಂಭಾಗದ ತುಂಗಾ ನದಿ ತಟದಲ್ಲಿ ಪುರುಷ ಮತ್ತು ಮಹಿಳೆಯ ಶವ ಭಾನುವಾರ ಪತ್ತೆಯಾಗಿದೆ.
READ | ಭಾರಿ ಮಳೆ, ಮರ ಬಿದ್ದು ಕುರಿ ಕಾಯುತ್ತಿದ್ದ ಮಹಿಳೆ ಸಾವು
ಮೃತರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಹಿಳೆ ಹಸಿರು ಸೀರೆ ಮತ್ತು ಪುರುಷ ಬಿಳಿ ಪಂಚೆ, ಶರ್ಟ್ ತೊಟ್ಟಿದ್ದಾರೆ. ಶವಗಳು ಅಕ್ಕಪಕ್ಕವೇ ಇದ್ದು, ಕೊಳತಿವೆ.
ಶವಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ
ತುಂಗಾ ನದಿಯ ತಟದಲ್ಲಿ ಎರಡು ಶವಗಳಿರುವುದನ್ನು ಕಂಡ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಶವವನ್ನು ಸಾಗಿಸಲು ನೆರವಾಗಿದ್ದಾರೆ. ಕೋಟೆ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.